ಚಿಕ್ಕೋಡಿ: ಟ್ರಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ಅದಗೋಂಡಾ ಬಾಬು ಪಾಟೀಲ್ (60), ಪತ್ನಿ ಛಾಯಾ ಅದಗೊಂಡ ಪಾಟೀಲ್ (55) ಚಂಪಾತಾಯಿ ಮಗದುಮ್ (80), ಮಹೇಶ್ ದೇವಗೊಂಡ ಪಾಟೀಲ್ (23) ಎಂದು ಗುರ್ತಿಸಲಾಗಿದೆ.
ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಹೊರಟಿದ್ದಾಗ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.