ಬೆಳ್ತಂಗಡಿ: ವಸತಿ ಗೃಹಕ್ಕೆ ದಾಳಿ; ವೈಶ್ಯವಾಟಿಕೆ ನಡೆಸುತ್ತಿದ್ದ 7 ಜನರ ಬಂಧನ

ಬೆಳ್ತಂಗಡಿ, ಫೆ.8: ಉಜಿರೆಯಲ್ಲಿರುವ ವಸತಿಗೃಹವೊಂದರಲ್ಲಿ ವೈಶ್ಯವಾಟಿಕೆ ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಖಚಿತ ಮಾಹಿತಿ ಪಡೆದ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದ ಪೊಲೀಸರು ಐವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.

ಫೆಬ್ರವರಿ 6 ರಂದು ರಾತ್ರಿ ಎಸ್ಪಿ ಅಮತೆ ವಿಕ್ರಮ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್ ಮತ್ತು ಅವರ ತಂಡವು ಲಾಡ್ಜ್ ಮೇಲೆ ದಾಳಿ ನಡೆಸಿತು. ಮಂಗಳವಾರ ಮಧ್ಯಾಹ್ನ ಲಾಡ್ಜ್ ಮಾಲೀಕರನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ವಿಚಾರಣೆಗೆ ಕರೆಸಿದಾಗ ಅಂತಹ ಚಟುವಟಿಕೆಗಳ ವಿರುದ್ಧ ಎಚ್ಚರಿಕೆ ನೀಡಲಾಯಿತು. ಆದರೆ, ವೈಶ್ಯವಾಟಿಕೆ ದಂಧೆ ಅವ್ಯಾಹತವಾಗಿ ಮುಂದುವರಿದಿದೆ ಎನ್ನಲಾಗಿದ್ದು, ಇದೊಂದು ದೊಡ್ಡ ದಂಧೆ ಎಂದು ಶಂಕಿಸಲಾಗಿದೆ.

ಉಜಿರೆಯಲ್ಲಿರುವ ವಸತಿಗೃಹವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

Latest Indian news

Popular Stories