ಬ್ರಹ್ಮಾವರ, ಜ.20: ಮುಕ್ಕೂರು ಗ್ರಾಮದ ಪೆರ್ವಾಜೆ ಹೆಬ್ಬಾರುಬೆಟ್ಟು ಎಂಬಲ್ಲಿ ಫಾರ್ಮ ಹೌಸ್ನಲ್ಲಿ ಬಿಹಾರ ಮೂಲದ ದಂಪತಿಯ ಹಸುಗೂಸು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.
ಬಿಹಾರ ಮೂಲದ ರಾಜ ಕುಮಾರ ಮತ್ತು ಆತನ ಹೆಂಡತಿ ರುಣಾ ದೇವಿ ದಂಪತಿಯ ಒಂದು ತಿಂಗಳ ಮಗು ಚಾಂದಿನಿ ಮೃತ ದುದೈರ್ವಿ. ದಂಪತಿ ಇಲ್ಲಿನ ಫಾರ್ಮ್ ಹೌಸ್ನಲ್ಲಿ ಕೂಲಿ ಕೆಲಸ ಮಾಡಿ, 5 ಜನ ಮಕ್ಕಳೊಂದಿಗೆ ಅಲ್ಲಿಯೇ ಸಮೀಪ ಒಂದು ಸಣ್ಣ ರೂಮ್ನಲ್ಲಿ ವಾಸವಾಗಿದ್ದರು.
ರುಣಾ ದೇವಿ ಕಳೆದ ಒಂದು ತಿಂಗಳ ಹಿಂದೆ ಹೆಣ್ಣು ಮಗವಿಗೆ ಜನ್ಮ ನೀಡಿದ್ದು, ಜ.20ರಂದು ಬೆಳಗ್ಗೆ 3 ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದು, ಮಲಗಿದ್ದ ಮಗುವನ್ನು ಎಬ್ಬಿಸಿದಾಗ ಮಗು ಉಸಿರಾಡದೇ ಮೃತಪಟ್ಟಿರುವುದಾಗಿ ಮಗುವಿನ ತಂದೆ ರಾಜಕುಮಾರ್ ತನ್ನ ಪತ್ನಿಗೆ ತಿಳಿಸಿದ್ದನು. ಈ ಮಗುವಿನ ಸಾವಿನ ಸಂಶಯ ವ್ಯಕ್ತವಾಗಿದ್ದು ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ