ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆ; ಬ್ರಾಹ್ಮಣರ ಕಾಲಿಗೆ ಬೀಳುವುದು ಮೂಡನಂಬಿಕೆಯ ಅಸಂಬದ್ಧತೆ – ನಟ ಚೇತನ್

ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆಯಾಗಿದೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆಯಾಗಿದೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ನಟ ಚೇತನ್ ಹೇಳಿದ್ದಾರೆ.

ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ಹೇಳಿದ್ದಾರೆ . ಈ ಹಿಂದೆ ಕುಮಾರಸ್ವಾಮಿ ಅವರು, ಪ್ರಹ್ಲಾದ್ ಜೋಶಿಯು ಗಾಂಧಿಯನ್ನು ಕೊಂದ ಪೇಶ್ವೆ ಬ್ರಾಹ್ಮಣ ಸಂಪ್ರದಾಯದಿಂದ ಬಂದವರು, ಜೋಶಿ ‘ಹಳೆಯ ಕರ್ನಾಟಕದ ಸಂಪ್ರದಾಯದ’ ಬ್ರಾಹ್ಮಣರಲ್ಲ ಎಂದು ಹೇಳಿದ್ದರು. ಮುಂದುವರೆದು ನಾವು ‘ಹಳೆಯ ಕರ್ನಾಟಕ ಸಂಪ್ರದಾಯದ’ ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್, ಇದು ಎಂತಹ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ ಎಂದಿದ್ದಾರೆ.

Latest Indian news

Popular Stories