ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.01 ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ

ಮಂಗಳೂರು, ಜನವರಿ 20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಕಸ್ಟಮ್ಸ್ ಅಧಿಕಾರಿಗಳು ಈ ವರ್ಷದ ಜ.1 ಮತ್ತು 18 ರ ನಡುವೆ 2,01,69,800 ರೂಪಾಯಿ ಮೌಲ್ಯದ ಒಟ್ಟು 3,677 ಗ್ರಾಂ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಚಿನ್ನ ಸಾಗಣೆಯನ್ನು ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ.

ದುಬೈ ಮತ್ತು ಅಬುಧಾಬಿಯಿಂದ ಬಂದಿದ್ದ ಎಂಟು ಮಂದಿ ಪ್ರಯಾಣಿಕರು ಅಕ್ರಮವಾಗಿ ಚಿನ್ನವನ್ನು ದೇಶಕ್ಕೆ ಸಾಗಿಸಲು ಯತ್ನಿಸಿದ್ದರು. ದುಬೈನಿಂದ ಬಂದ ಪ್ರಯಾಣಿಕನೊಬ್ಬ ತನ್ನ ಲಗೇಜಿನಲ್ಲಿ ಬಚ್ಚಿಟ್ಟಿದ್ದ 3,20,265 ರೂಪಾಯಿ ಮೌಲ್ಯದ ಇ-ನಿಕೋಟಿನ್ ದ್ರವದ ಇ-ಸಿಗರೇಟ್‌ಗಳನ್ನು ಕಳ್ಳಸಾಗಣೆ ಮಾಡಿದ್ದಾನೆ.

ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Latest Indian news

Popular Stories