ಮಂಗಳೂರು: ಉಡುಪಿ ವೀಡಿಯೋ ಪ್ರಕರಣದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ವರದಿ ಬಂದ ಮೇಲೆ ಮುಂದಿನ ಕ್ರಮ – ಸಿ.ಎಮ್ ಸಿದ್ದರಾಮಯ್ಯ

ಮಂಗಳೂರು: ಕರಾವಳಿ ಜಿಲ್ಲೆಯಾದ ದ.ಕ ಮತ್ತು ಉಡುಪಿಯ ಭೇಟಿಯ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಡುಪಿ ವೀಡಿಯೋ ಪ್ರಕರಣದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ. ಮಹಿಳಾ ಆಯೋಗ ಸದಸ್ಯ ಖುಷ್ಬೂ ಅವರು ಹಿಡನ್ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ವರದಿ ಬರಲಿ ನಂತರ ಕ್ರಮಕೈಗೊಳ್ಳುತ್ತೇವೆ ಎಂದರು.

ಕರಾವಳಿಯ ಮಳೆ ಹಾನಿ ಪರಿಶೀಲನೆ:

ಕರಾವಳಿಗೆ ಈಗಾಗಲೇ ಬಜೆಟ್ನಲ್ಲಿ ಏನು ಕೊಡಬಹುದು ಎಂದು ಹೇಳಿದ್ದೇವೆ. ಜುಲೈ ತಿಂಗಳಲ್ಲಿ ನಡೆದ ಮಳೆ ಹೆಚ್ಚಾಗಿದೆ ಅದರ ಕುರಿತು ಪರಿಶೀಲಿಸಲು ಬಂದಿದ್ದೇನೆ ಎಂದರು.

ನೈತಿಕ ಪೊಲೀಸ್’ಗಿರಿ ವಿರುದ್ಧ ಕ್ರಮ:

ನೈತಿಕ ಪೊಲೀಸ್ ಗಿರಿ ಯಾರು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಆರಂಭದಲ್ಲಿ ಸಮಸ್ಯೆಯಿದೆ ಮುಂದೆ ಎಲ್ಲ ಸರಿಯಾಗುತ್ತದೆ ಎಂದರು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.

ಸೌಜನ್ಯ ಪ್ರಕರಣ ಸಿಬಿಐ ತನಿಖೆ ನೀಡಲಾಗಿತ್ತು. ಇದೀಗ ಕಾನೂನು ಪ್ರಕರಣ ಏನು ಮಾಡಬೇಕೆಂದು ನೋಡುತ್ತೇವೆ. ಇದೀಗ ಬಂದಿರು ತೀರ್ಪಿನ ಕುರಿತು ಮೇಲ್ಮನವಿ ಹೋಗುತ್ತಾರೆ. ನಾನು ತೀರ್ಪಿನ ಪ್ರತಿ ಓದಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧವಾಗಲಿ, ವೈಯಕ್ತಿಕವಾಗಿ‌ ಆಗಲಿ ಸುಳ್ಳು ಸುದ್ಧಿ ಹಬ್ಬಿಸಿ ತೇಜೋವಧೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು. ಟೀಕೆ ಬೇರೆ ತೇಜೊವಧೆ ಬೇರೆ, ಕುಟುಂಬದ ವಿರುದ್ಧ ತೇಜೋವಧೆ ಮಾಡಬಹುದೇ? ಎಂದು ಪತ್ರಕರ್ತರನ್ನು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಕಸ್ತೂರಿ ರಂಗನ್ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ನಾವು ಬೇಡ ಎಂದಿದ್ದೇವೆ. ಆದರೆ ಪರಿಸರ ರಕ್ಷಣೆಯನ್ನು ನಾವು ಮಾಡುತ್ತೇವೆ ಎಂದರು.

Latest Indian news

Popular Stories