ಮಂಗಳೂರು, ಜೂ.12: ನೆತ್ತಿಲ ಗ್ರಾಮದಲ್ಲಿ ಮೆಥಾಂಫೆಟಮೈನ್ ಮಾದಕ ದ್ರವ್ಯವನ್ನು ಹೊಂದಿದ್ದ ಇಬ್ಬರನ್ನು ಕೊಣಾಜೆ ಪೊಲೀಸರು ಜೂ.11ರ ಭಾನುವಾರದಂದು ಬಂಧಿಸಿದ್ದಾರೆ.
ಜೂನ್ 11 ರಂದು ಸಿಕ್ಕ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಪಿಎಸ್‌ಐ ಅಶೋಕ್ ಅವರು ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ನೆತ್ತಿಲ ಗ್ರಾಮದ ಕಂಬಳದ ಬಳಿ ಅಕ್ರಮವಾಗಿ ಮೆಥಾಂಫೆಟಮೈನ್ ಮಾರಾಟ ಮಾಡಲಾಗುತ್ತಿದೆ ಎಂಬುದಾಗಿ ದಾಳಿ ನಡೆಸಿದರು. ಕಾರ್ಯಾಚರಣೆ ವೇಳೆ ಕೆಎ 19 ಎಚ್ ಡಿ 0392 ನೋಂದಣಿ ಸಂಖ್ಯೆಯ ಸುಜುಕಿ ಆಕ್ಸೆಸ್ ಸ್ಕೂಟರ್, ಅಂದಾಜು 20 ಗ್ರಾಂ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ವ್ಯಕ್ತಿಗಳು ಉಳ್ಳಾಲ ತಾಲೂಕಿನ ನಿವಾಸಿಗಳಾದ ಅಬ್ದುಲ್ ರಶೀದ್ ಮೊಯುದ್ದೀನ್ (41) ಮತ್ತು ಪಿ ಆರಿಫ್ (ಹ್ಯಾರಿಸ್ ಎಂದೂ ಕರೆಯುತ್ತಾರೆ) (40) ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,06,500 ರೂ. ಆಗಿದೆ.
ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತ ಅಂಶು ಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕೊಣಾಜೆ ಪೊಲೀಸ್ ಉಪನಿರೀಕ್ಷಕರಾದ ನಾಗರಾಜ್ ಎಸ್ ಮತ್ತು ಅಶೋಕ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ನವೀನ್, ಮಂಜಪ್ಪ, ಶಿವಕುಮಾರ್, ಪುರುಷೋತ್ತಮ, ಚಂದ್ರಕಾಂತ್, ಅನಿಲ್ ಕುಮಾರ್, ಬರಂ ಬಡಿಗೇರ, ಹೇಮಂತ್ ಕುಮಾರ್, ರವ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲು ಶ್ರಮಿಸಿದರು.