ಮಂಗಳೂರು: ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ

ಮಂಗಳೂರು, ಫೆ.10: ಕದ್ರಿ ಪಾರ್ಕ್ ಬಳಿ ಅಂತರ್ ಧರ್ಮೀಯ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕಡಬದ ಯಶವಿತ್, ಚಿಕ್ಕಮಗಳೂರಿನ ಶರತ್, ಅಳಪೆಯ ಧೀರಜ್ ಮತ್ತು ಬಂಟ್ವಾಳದ ಅಭಿಜಿತ್ ಬಂಧಿತ ಆರೋಪಿಗಳು. ನಾಲ್ವರೂ ಬಲಪಂಥೀಯ ಸಂಘಟನೆಯ ಸದಸ್ಯರು ಎಂದು ಹೇಳಲಾಗಿದೆ.

ಆರೋಪಿಗಳು ಉತ್ತರ ಕರ್ನಾಟಕ ಮೂಲದ ದಂಪತಿ ಮೇಲೆ ಬುಧವಾರ ಹಲ್ಲೆ ನಡೆಸಿದ್ದರು. ಕದ್ರಿ ಪೊಲೀಸ್ ಠಾಣೆಯಲ್ಲಿ ದಂಪತಿಗಳು ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest Indian news

Popular Stories