ಮಂಗಳೂರು ವಿಮಾನ ನಿಲ್ದಾಣ ನಾಮ ಫಲಕದಲ್ಲಿ ‘ಅದಾನಿ’ ಹೆಸರು ತೆಗೆಯಲು ಹೈಕೋರ್ಟ್ ಆದೇಶ

ಮಂಗಳೂರು: ವಿಮಾನ ನಿಲ್ದಾಣ ಖಾಸಗೀಕರಣದ ಮೊದಲ ಹಂತದ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಅದಾನಿ ಸಮೂಹಕ್ಕೆ ನೀಡಲಾದ ಆರು ಸರ್ಕಾರಿ ವಿಮಾನ ನಿಲ್ದಾಣಗಳಲ್ಲಿ ಅಕ್ಟೋಬರ್ 2020 ರಲ್ಲಿ ಮಂಗಳೂರು ಕೂಡ ಒಂದು. ಅದಾನಿ ಸಮೂಹವು ಅಕ್ಟೋಬರ್ 31, 2020 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಂಡು ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಿತು. ಈ ಮುಂಚೆ ವಿಮಾನ ನಿಲ್ದಾಣವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ (AAI) ನಿರ್ವಹಿಸಲ್ಪಡುವ ಒಂದು ಸರ್ಕಾರಿ-ವಿಮಾನ ನಿಲ್ದಾಣವಾಗಿತ್ತು.

ನಂತರ ಸಾಮಾಜಿಕ ಕಾರ್ಯಕರ್ತರು ಮತ್ತು ಏರ್‌ಪೋರ್ಟ್ ಉದ್ಯೋಗಿಗಳ ಒಕ್ಕೂಟವು ಫೆಬ್ರವರಿ 2021 ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಹಸ್ತಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ವಿಮಾನ ನಿಲ್ದಾಣಗಳ ಖಾಸಗೀಕರಣವು ಕಾನೂನುಬಾಹಿರ,
ಪ್ರಾಧಿಕಾರ ಕಾಯಿದೆ ವ್ಯಾಪ್ತಿ
ಮೀರಿದೆ ಎಂದು ವಾದ ಮಂಡಿಸಲಾಗಿತ್ತು.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ನೌಕರರ ಸಂಘವು ಸಲ್ಲಿಸಿದ ಅರ್ಜಿಯು, ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವುದು ಕೇವಲ ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ ಸಾರ್ವಜನಿಕರ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತದೆ.ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಆದೇಶಗಳನ್ನು ಕಾಯ್ದಿರಿಸಿತ್ತು.

ಇದೀಗ ಆದೇಶ ಹೊರಡಿಸಿರುವ ಹೈಕೋರ್ಟ್ ಪ್ರಥಮವಾಗಿ ಅದಾನಿ ಸಂಸ್ಥೆಯು ವಿಮಾನ ನಿಲ್ದಾಣದ ನಿರ್ವಹಣೆ ಮಾಡುವುದು ಬಿಟ್ಟು ವಿಮಾನ ನಿಲ್ದಾಣವೇ ಅವರದಂತೆ ವರ್ತಿಸಬಾರದೆಂದು ತಿಳಿಸಿದೆ. ಅದರೊಂದಿಗೆ ಮುಖ್ಯವಾಗಿ ನಾಮ ಫಲಕಗಳಲ್ಲಿ ಅದಾನಿ ಹೆಸರನ್ನು ತೆಗೆದು ಹಾಕಲು ಆದೇಶ ಹೊರಡಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿಲ್’ರಾಜ್ ಆಳ್ವ, ಕಾನೂನು ಹೋರಾಟದಲ್ಲಿ ನಮಗೆ ದೊಡ್ಡ ಜಯವಾಗಿದೆ. ಅದಾನಿ ಹೆಸರನ್ನು ತೆಗೆದುಹಾಕಲು ಆದೇಶಿಸಿರುವ ಕುರಿತು ತಿಳಿಸಿದ್ದಾರೆ.

Latest Indian news

Popular Stories

error: Content is protected !!