ಮಂಗಳೂರು | ಹಂಪ್’ನಲ್ಲಿ ಸ್ಕೂಟರ್ ಜಂಪ್ – ಕಾರ್ಕಳ ಮೂಲದ ಮಹಿಳೆ ಮೃತ್ಯು

ಮಂಗಳೂರು, ಆ.7: ಕಟೀಲು ಸಮೀಪದ ಕಲ್ಲಕುಮೇರು ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪತಿಯೊಂದಿಗೆ ಪಿಲಿಯನ್ ರೈಡ್ ಮಾಡುತ್ತಿದ್ದ ಮಹಿಳೆಯೊಬ್ಬರು ರಸ್ತೆಯ ಹಂಪ್ ಮೇಲೆ ಸ್ಕೂಟರ್ ಹಾರಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.

ಮೃತರನ್ನು ಕಾರ್ಕಳದ ಈದು ಗ್ರಾಮದ ನಿವಾಸಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಮಮತಾ ಶೆಟ್ಟಿ (35) ಎಂದು ಗುರುತಿಸಲಾಗಿದೆ.

ಮಮತಾ ಅವರು ತಮ್ಮ ಪತಿಯ ದ್ವಿಚಕ್ರ ವಾಹನದ ಮೇಲೆ ಪಿಲಿಯನ್ ಸವಾರಿ ಮಾಡಿಕೊಂಡು ಕಾರ್ಕಳದಿಂದ ಕಟೀಲಿಗೆ ಬೆಳಗ್ಗೆ 5.30ರ ಸುಮಾರಿಗೆ ಹೋಗುತ್ತಿದ್ದರು. ಕಲ್ಲಕುಮೇರು ಬಳಿ ರಸ್ತೆ ಹಂಪ್ ಇರುವುದನ್ನು ಆಕೆಯ ಪತಿ ಗಮನಿಸಿರಲಿಲ್ಲ. ದ್ವಿಚಕ್ರ ವಾಹನ ಜಿಗಿದ ಪರಿಣಾಮ ಮಮತಾ ರಸ್ತೆಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಮತಾ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Latest Indian news

Popular Stories