ಮಂಗಳೂರು: ಜನವರಿ 18: ಕೆಲಸದ ನಿಮಿತ್ತ ಕಚೇರಿಗೆ ತೆರಳಿದ್ದ ಯುವತಿಯೊಬ್ಬಳು ಜನವರಿ 16 ರಿಂದ ನಾಪತ್ತೆಯಾಗಿದ್ದಾಳೆ.
ಸುರತ್ಕಲ್ ಮೂರನೇ ಬ್ಲಾಕ್ ನಿವಾಸಿ ಶಿವಾನಿ (20) ನಾಪತ್ತೆಯಾದ ಯುವತಿ. ಆಕೆ ಖಾಸಗಿ ಹಣಕಾಸು ಕಂಪನಿಯ ಉದ್ಯೋಗಿ.
ಆಫೀಸಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ, ಆಕೆ ಮನೆಗೆ ಹಿಂತಿರುಗಿರಲಿಲ್ಲ.
ಕಂಪನಿಯ ಇತರ ಸಿಬ್ಬಂದಿಯ ಬಳಿಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.ಶಿವಾನಿಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣ ದಾಖಲಾಗಿದೆ.