ಮಂಗಳೂರು, ಫೆ.1: ಕೊಣಾಜೆ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಜನವರಿ 31ರಂದು ನೆತ್ತಿಲಪದವು ಎಂಬಲ್ಲಿ ಕಾರನ್ನು ವಶಪಡಿಸಿಕೊಂಡು ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 27 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
ಮಂಜೇಶ್ವರದ ಅಬೂಬಕ್ಕರ್ ಸಿದ್ದಿಕ್ (35) ಮತ್ತು ಹೈದರ್ ಅಲಿ (39) ಮತ್ತು ಕುಂಬಳೆ ನಿವಾಸಿ ಅಖಿಲ್ ಎಂ (25) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 32,07,000 ರೂ. ಆಗಿದೆ.
ಕೊಣಾಜೆ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪಿಎಸ್ ಐ ಶರಣಪ್ಪ ಭಂಡಾರಿ, ಸಿಬ್ಬಂದಿ ಶೈಲೇಂದ್ರ, ನವೀನ್, ವಿನ್ಸೆಂಟ್ ರೋಡ್ರಿಗಸ್, ಸುರೇಶ್, ಬರಮ ಬಡಿಗೇರ, ಹೇಮಂತ್, ಪುರುಷೋತ್ತಮ, ದೇವರಾಜ್, ಶಿವಕುಮಾರ್, ದೀಪಕ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಮನೋಜ್ ಕಾರ್ಯಾಚರಣೆ ನಡೆಸಿದರು.
ಪೊಲೀಸ್ ಆಯುಕ್ತ ಶಶಿಕುಮಾರ್, ಉಪ ಪೊಲೀಸ್ ಆಯುಕ್ತ ಕಾನೂನು ಮತ್ತು ಸುವ್ಯವಸ್ಥೆ, ಅಂಶುಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ ಅಪರಾಧ ಮತ್ತು ಸಂಚಾರ, ದಿನೇಶ್ ಅವರು ನಿರ್ದೇಶನಗಳನ್ನು ನೀಡಿದ್ದರು. ಸಹಾಯಕ ಪೊಲೀಸ್ ಆಯುಕ್ತ ಧನ್ಯ ನಾಯಕ್ ಮಾರ್ಗದರ್ಶನ ನೀಡಿದ್ದರು.