ಮಗಳ ವಿರುದ್ಧವೇ ಕೋಟ್ಯಾಂತರ ರೂಪಾಯಿ ‌ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ದಾಖಲು

ಬೆಂಗಳೂರು: ಇದೊಂದು ಅಚ್ಚರಿಯ ಪ್ರಕರಣ. ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಲಾಕರ್ ನಲ್ಲಿಡುತ್ತೇನೆ ಎಂದು ಹೋಗಿದ್ದ ಮಗಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೆ, ಮಗಳ ವಿರುದ್ಧವೇ ಚಿನ್ನಾಭರಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಜೆಪಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ವಿಜಯಲಕ್ಷ್ಮೀ ಎಂಬವರು ತಮ್ಮ ಮಗಳು ತೇಜವಂತಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಈ ವೇಳೆ ಆಪರೇಷನ್ ಮಾಡಿಸಿಕೊಂಡ ತಾಯಿಯನ್ನು ಕ್ಷೇಮ ವಿಚಾರಿಸಿ ಪುತ್ರಿ ತೇಜವಂತಿ, ಚಿನ್ನಾಭರಣಗಳನ್ನು ಲಾಕರ್ ನಲ್ಲಿಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದರಂದೆ ಹೇಳಲಾಗಿದೆ.

Latest Indian news

Popular Stories