ಮಣಿಪುರ:  ಕ್ಯಾಮರಾ ಮುಂದೆ ಇಬ್ಬರು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ಗ್ಯಾಂಗ್ ರೇಪ್!

ಮಣಿಪುರ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಕ್ಯಾಮರಾ ಮುಂದೆ ನಗ್ನಗೊಳಿಸಿ ಪರೇಡ್ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಘಟನೆಯ ಬಗ್ಗೆ ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾಗಿದ್ದು, ಈ ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗತೊಡಗಿದೆ. 

ಮೇ.04 ರಂದು ಈ ಘಟನೆ ಕಾಂಗ್ಪೋಕ್ಪಿ ಎಂಬಲ್ಲಿ ನಡೆದಿದೆ ಎಂದು ದೇಶೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಆರೋಪಿಸಿದೆ. ಪೊಲೀಸರ ಪ್ರಕಾರ ಕಾಂಗ್ಪೋಕ್ಪಿಯಲ್ಲಿ ಎಫ್ಐಆರ್ ದಾಖಲಾಗಿದೆಯಾದರೂ ಬೇರೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ 

ಆದ್ಯತೆಯನ್ನು ನೀಡಿ ಈ ಪ್ರಕರಣದ ತನಿಖೆಯನ್ನು ನಡೆಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಎನ್ ಬಿರೇನ್ ಸಿಂಗ್ ಆದೇಶ ನೀಡಿದ್ದಾರೆ.

Latest Indian news

Popular Stories