ಮತಾಂತರಗೊಂಡ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಸೌಲಭ್ಯ ಇಲ್ಲ- ಮಾಧುಸ್ವಾಮಿ

ತುಮಕೂರು: ಜನವರಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಮಂಡಿಸಲಿದ್ದು, ಬಲವಂತದಿಂದ ಮತಾಂತರ ತಡೆಗೆ ಕಾನೂನನ್ನು ಜಾರಿಗೆ ತರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಗೊಂಡ ಪರಿಶಿಷ್ಟ ಜಾತಿ, ಪಂಗಡದವರು, ಮೀಸಲಾತಿ ಸೌಲಭ್ಯ ಕಳೆದುಕೊಳ್ಳಲಿದ್ದಾರೆ. ಇದು ಅವರ ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ಶಾಲೆಯಲ್ಲಿಯೂ ನೋಂದಾಯಿಸಲ್ಪಡುತ್ತದೆ ಎಂದು ಅವರು ತಿಳಿಸಿದರು.

ಒಂದು ವೇಳೆ ಸರ್ಕಾರಿ ನೌಕರರು ಮತಾಂತರವಾದರೆ, ಅದು ಅವರ ಅಥವಾ ಅವಳ ಸೇವೆಯಲ್ಲಿ ನೋಂದಣಿಯಾಗುತ್ತದೆ. ಎಸ್‌ಸಿ ಮತ್ತು ಎಸ್‌ಟಿ ಕೋಟಾಗಳ ಅಡಿಯಲ್ಲಿ ಈಗಾಗಲೇ ಅವರು ಪಡೆಯುತ್ತಿರುವ ಪ್ರಯೋಜನಗಳನ್ನು ನಾವು ಹಿಂಪಡೆಯುವುದಿಲ್ಲ. ಆದರೆ ಮತಾಂತರದ ನಂತರ, ಅವರು ಅದಕ್ಕೆ ಅರ್ಹರಾಗಿರುವುದಿಲ್ಲ ಎಂದು ಅವರು ಹೇಳಿದರು.

ನಾವು ಮತಾಂತರವನ್ನು ನಿಷೇಧಿಸುತ್ತಿಲ್ಲ, ಆದರೆ ಮದುವೆಗಾಗಿ ಮಾಡಿದ ಮತಾಂತರಗಳು ಮತ್ತು ಆಮಿಷಗಳ ಮೂಲಕ ಅಮಾಯಕ ಜನರನ್ನು ಮಾಡಿದ ಮತಾಂತರಗಳು ಮೋಸಕ್ಕೆ ಸಮಾನವಾಗಿದೆ. ಈಗಾಗಲೇ ಏಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜಾರಿಯಲ್ಲಿರುವ ಹೊಸ ಕಾನೂನು ಧರ್ಮಕ್ಕೆ ಭದ್ರತೆ ನೀಡಲಿದ್ದು, ಸಾರ್ವಜನಿಕ ಕಾನೂನು ಕಾಪಾಡುತ್ತದೆ ಎಂದು ತಿಳಿಸಿದರು.

Latest Indian news

Popular Stories

error: Content is protected !!