ಮತ್ತೆ ಏರಿಕೆಯಾದ ಪೆಟ್ರೋಲ್, ಡಿಸೇಲ್ ಬೆಲೆ – ನಾಗರಿಕರ ನೋವಿಗೆ ಡೋಂಟ್ ಕೇರ್

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಕಂಡು ಜನ ಸಾಮಾನ್ಯರ ಆಕ್ರೋಶದ ಬೆನ್ನಲ್ಲೇ ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ.

ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಅಕ್ಟೋಬರ್‌ 23ನೆಯ ದಿನವಾದ ಇಂದು (ಶನಿವಾರ) ಕೂಡ ತೈಲ ದರ ಏರಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನ ವೇಳೆಗೆ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 37 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ. ಶಾಕಿಂಗ್ ವಿಚಾರ ಅಂದ್ರೆ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್‌ ಜೊತೆಗೆ ಡೀಸೆಲ್‌ ದರ ಕೂಡ ₹100ರ ಗಡಿ ದಾಟಿ ಮುನ್ನುಗ್ಗುತ್ತಿದೆ.

Latest Indian news

Popular Stories

error: Content is protected !!