ಬೆಂಗಳೂರು: ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಮದುವೆಯಾದ ನಂತರ ದೈಹಿಕ ಸಂಪರ್ಕ ಹೊಂದದಿರುವುದು ಐಪಿಸಿ 498 A ಪ್ರಕಾರ ಹಿಂಸೆಯಲ್ಲ ಆದರೆ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 12 (1) a ಪ್ರಕಾರ ಕೌರ್ಯವಾಗಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಈ ಪ್ರಕರಣವನ್ನು IPC 498 A ಅಡಿಯಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ವಜಾಗೊಳಿಸಿದೆ.
ದಂಪತಿಗಳು ಡಿಸೆಂಬರ್ 2019 ರಲ್ಲಿ ವಿವಾಹವಾದರು ಮತ್ತು ಕೇವಲ 28 ದಿನಗಳ ಕಾಲ ಒಟ್ಟಿಗೆ ಇದ್ದರು. ಫೆಬ್ರವರಿ 2020 ರಲ್ಲಿ ಹೆಂಡತಿ ದೂರು ಸಲ್ಲಿಸಿದಳು. ಅತ್ತೆಯ ವಿರುದ್ಧವೂ ದೂರು ಬಂದಿದ್ದರೂ, ಹೆಂಡತಿಯ ಮುಖ್ಯ ಕುಂದುಕೊರತೆ ಬ್ರಹ್ಮನ ಅನುಯಾಯಿಯಾದ ಗಂಡನ ವಿರುದ್ಧವಾಗಿತ್ತು. ಆತ ಬ್ರಹ್ಮ ಕುಮಾರಿಯ ಅನುಯಾಯಿಯಾಗಿದ್ದು ಅವರ ಭಾಷಣ ಕೇಳುತ್ತ ದೈಹಿಕ ಸಂಪರ್ಕ ಮುಖ್ಯವಲ್ಲ ಆತ್ಮಗಳ ಸಮ್ಮಿಲನ ಮುಖ್ಯ ಎಂಬ ಮಾತುಗಳನ್ನು ಆಡುತ್ತಿದ್ದು ಈ ಕಾರಣಕ್ಕೆ ಹೆಂಡತಿ ಕೋರ್ಟ್ ಮೆಟ್ಟಿಲೇರಿದ್ದಳು.
ಹಿಂದೂ ವಿವಾಹ ಕಾಯಿದೆಯ ಪ್ರಕಾರ ಅಂತಹ ಕ್ರೌರ್ಯದ ಆಧಾರದ ಮೇಲೆ ದೂರುದಾರರಿಗೆ ವಿಚ್ಛೇದನದ ಆದೇಶವನ್ನು ನೀಡಲಾಗುತ್ತದೆ ಮತ್ತು ಅದೇ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.