ಉಡುಪಿ: ಕರಾವಳಿಯವರು ಕೂಡ ಶಿಕ್ಷಣದಲ್ಲಿ ಮುಂದು ರಾಜಕೀಯವಾಗಿ ಪ್ರಭುದ್ದರೂ ಕೂಡ ಜೊತೆಗೆ ಕರಾವಳಿ ಜನರು ವ್ಯಾಪಾರ ಪ್ರವೃತ್ತಿ ಉಳ್ಳವರು ಇವತ್ತು ಹಲವು ರಾಜ್ಯಗಳಲ್ಲಿ, ಜಗತ್ತಿನ ಅನೇಕ ದೇಶಗಳಲ್ಲಿ ವ್ಯಾಪಾರ ವಹಿವಾಟು ಹೋಟೆಲ್ ವ್ಯವಹಾರ ಇವುಗಳೆಲ್ಲ ಮಾಡ್ತಾ ಇರತಕ್ಕಂಥವರು ಕರಾವಳಿ ಜನತೆ. ಆದರೆ ಇತ್ತೀಚಿಗೆ ಈ ಭಾಗದ ಯುವಕರು ಬಿಜೆಪಿಯ ದುರುದ್ದೇಶ ಪೂರಿತ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖೇದ ವ್ಯಕ್ತಪಡಿಸಿದರು.
ಅವರು ಇಂದು ಉಡುಪಿಯ ಮಿಶನ್ ಕಾಪೌಂಡ್ ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು
ಭಾರತೀಯ ಜನತಾ ಪಕ್ಷದವರು ಹಿಂದುಗಳ ಪರವಾಗಿ ಇರುವವರು ಅಲ್ಲ.ಹಿಂದುತ್ವದ ಪರವಾಗಿರುವರು. ನಾನು ಅಪ್ಪಟ ಹಿಂದು,ಡಿಕೆಶಿ ಅಪ್ಪಟ ಹಿಂದು, ಸುರ್ಜೆ ವಾಲ ಅಪ್ಪಟ್ಟ ಹಿಂದು ಆದರೆ ನಾವು ಹಿಂದುತ್ವಾದಿಗಳಲ್ಲ. ಹಿಂದುಗಳ ಪರವಾಗಿರುವವರು ನಾವು, ಮನುಷ್ಯತ್ವದ ಪರವಾಗಿರುವವರು ನಾವು.ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ದ್ವೇಷಿಸಬಾರದು. ಯಾವ ಧರ್ಮವು ಕೂಡ ಕೊಲ್ಲು, ಹಿಂಸೆ ಕೊಡು ಎಂದು ಹೇಳುವುದಿಲ್ಲ ಎಂದರು.
ಆರ್ ಎಸ್ ಎಸ್ಸಿಗರ ಮಕ್ಕಳು, ಶಾಸಕರ ಮಕ್ಕಳು ಕೊಲೆಯಾದ ನಿದರ್ಶನ ಇದೆಯೇ? ಕೊಲೆ ಮಾಡುವವರು, ಆಗುವವರು ಹಿಂದುಳಿದ ವರ್ಗದವರು. ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಕೊಲೆಯಾದರೆ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ಪರೇಶ್ ಮೇಸ್ತಾ ಆತ್ಮಹತ್ಯೆ ಮಾಡಿ ಸತ್ತು ಹೋಗಿದ್ರು ಆದರೆ ಅದನ್ನುಕೊಲೆಯೆಂದು ಸಂಸದ್ರು ಬಿಂಬಿಸಿದ್ರು. ಅಂತಹ ಸಂಸದರು ಸಂಸದರಾಗಲು ನಾಲಯಾಕ್ ಎಂದರು. ಮೋದಿ, ಅಮಿತ್ ಶಾ ಕೆಳಗೆ ಇರುವ ಸಿಬಿಐ ಈ ಕುರಿತು ವರದಿ ನೀಡಿದೆ ಎಂದರು.
ಬಿಜೆಪಿ ಅಧ್ಯಕ್ಷನಾಗಲು ನಳಿನ್ ಲಾಯಕ್ ಅಲ್ಲ. ಆತ ವಿಧೂಷಕ. ಜನರ ಸಮಸ್ಯೆಗಳನ್ನು ಮಾತನಾಡಬಾರದು ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ ಕಟೀಲ್. ಅವರ ಮಾತುಗಳಿಗೆ ಮರಳಾಗಬೇಡಿ. ನಿಮ್ಮ ಭವಿಷ್ಯ ಹಾಳು ಮಾಡುತ್ತಾರೆ ಎಂದರು.
ಮೀನುಗಾರರಿಗೆ 500 ಲೀಟರ್ ಸೀಮೆಎಣ್ಣೆ ನೀಡುವುದಾಗಿ ಭರವಸೆ ನೀಡಿದ್ರು ಆದರೆ ಕೊಟ್ಟಿಲ್ಲ. ಆದ್ದರಿಂದ ವಿವೇಕಾನಂದರು ಒಂದು ಮಾತು ಹೇಳಿದ್ರು ಮನುವಾದಿಗಳು ಈ ದೇಶಕ್ಕೆ ಶಾಪ. ಅದು ನಿಜವಾಗಿದೆ ಎಂದರು.
ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡುತ್ತೀರಿ ಎಂದು ಹೇಳಿದ್ರಲ್ಲ ಅವರಿಗೆ ಕೊಟ್ಟ್ರಾ ನರೇಂದ್ರ ಮೋದಿಯವರೇ? ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇದುವರೆಗೆ ಬಂದಿಲ್ಲ. ಅವರ ಪ್ರಕಾರ ಹಿಂದೂಗಳೆಂದರೆ ಒಬ್ಬ ಸಾವರ್ಕರ್ ಒಬ್ಬ ಗೋಡ್ಸೆ. ಮಹಾತ್ಮ ಗಾಂಧಿಯನ್ನು ಕೊಂದ , ಮತಾಂಧ ಗೋಡ್ಸೆ. ಹಿಂದು ಧರ್ಮದ ಸುಧಾರಣೆಗಾಗಿ ಪ್ರಯತ್ನ ಪಟ್ಟವರು ವೀವೆಕಾನಂದರು, ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿ ಹಿಂದು ಅಲ್ವಾ? ಎಂದು ಪ್ರಶ್ನಿಸಿದರು.
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಮಾಶಸನ ಪಡೆದ ಸಾವರ್ಕರ್ ಹಿಂದುತ್ವ ಹುಟ್ಟು ಹಾಕಿದವರು. ಇಂತಹ ಹಿಂದುತ್ವವಾದಿಗಳ ಮಾತು ಕೇಳುತ್ತೀರಾ. ಇವರ ಮಾತುಗಳಿಗೆ ಮರಳಗಾಬೇಡಿ ಎಂದು ಯುವಕರಿಗೆ ಕರೆ ನೀಡಿದ ಅವರು ನಮ್ಮ ವಿರೋಧ ಮನುವಾದಕ್ಕೆ, ಹಿಂದುತ್ವಕ್ಕೆ ಹೊರತು ಹಿಂದು ಧರ್ಮಕ್ಕಲ್ಲ ಎಂದರು.
ವಿಧಾನ ಸೌಧದ ಗೋಡೆಗೆ ಕಿವಿಗೊಡಿ ಲಂಚ ಲಂಚ ಎಂದು ಪಿಸುಗುಡುತ್ತದೆ.ಹಿಂದುತ್ವಾದಿಗಳಿಗೆ ಸಿದ್ಧಾಂತ ಇಲ್ಲ. ಅವರು ದ್ವೇಷ ಹುಟ್ಟಿಸುತ್ತಾರೆ ಎಂದು ಹೇಳಿದರು.
ಪ್ರಮೋದ್ ಮಧ್ವರಾಜ್’ನನ್ನು ಸೋಲಿಸಿ:
ಟಿಕೆಟ್’ಗಾಗಿ ಜೆಡಿಎಸ್ ಗೆ ಹೋಗಿದ್ದ ಪ್ರಮೋದ್, ಇದೀಗ ಬಿಜೆಪಿಗೆ ಹೋಗಿದ್ದಾರೆ. ಪ್ರಮೋದ್ ಮಧ್ವರಾಜ್ ಗೆ ಟಿಕೆಟ್ ಕೊಟ್ರೆ ಸೋಲಿಸಿ ಎಂದು ಕರೆ ನೀಡಿದರು.
ಪಿ.ಎಫ್.ಐ ಬಿಜೆಪಿಗೆ ನಂಟಿದೆ:
ಈ ದೇಶದ ಮೊದಲ ಭಯೋತ್ಪಾದಕ ಗೋಡ್ಸೆ. ಎಲ್ಲ ಭಯೋತ್ಪಾದನೆಯನ್ನು ನಾವು ವಿರೋಧಿಸುತ್ತೇವೆ. 5.9.20 20 ಪಿ.ಎಫ್.ಐ ಪ್ರಕರಣ ರದ್ದು ಮಾಡಿದ್ದೇನೆ ಎಂಬ ಆರೋಪದ ವರದಿ ಕೇಳಿದೆ ಆದರೆ ವರದಿಯಲ್ಲಿ ಬಿಜೆಪಿ ಸರಕಾರ ಯಾವುದೇ ಉಲ್ಲೇಖ ಮಾಡಿಲ್ಲ.ನಾನು ಪಿ.ಎಫ್.ಐ ಕಾರ್ಯಕರ್ತರ ಪ್ರಕರಣ ರದ್ದು ಮಾಡಿಲ್ಲ ದಲಿತರ,ರೈತರ, ವಿದ್ಯಾರ್ಥಿಗಳ ಮೇಲಿದ್ದ ಪ್ರಕರಣ ರದ್ದಾಗಿದ್ದು ಎಂದು ಸರಕಾರವೇ ವರದಿ ನೀಡಿದೆ ಎಂದು ಸ್ಪಷ್ಟ ಪಡಿಸಿದರು.
ಪಿ.ಎಫ್.ಐನೊಂದಿಗೆ ನಂಟಿದ್ದರೆ ಅದು ಬಿಜೆಪಿಗೆ. ಕೇವಲ ಪಿ.ಎಫ್.ಐ ಬ್ಯಾನ್ ಮಾಡಿ sdpi ಬಿಟ್ಟಿದ್ದಾರೆ.ಪಿ.ಎಫ್.ಐ ಆರ್.ಎಸ್.ಎಸ್ ಇದ್ದ ಹಾಗೆ ಆದರೆ ಎಸ್.ಡಿ.ಪಿ.ಐ ಬಿಜೆಪಿ ಇದ್ದ ಹಾಗೆ ಎಂದು ಹೇಳಿದರು.