ಮನೆಗಳ ಮೇಲೆ ಕಾಡಾನೆ ದಾಳಿ

ಕೊಯಮತ್ತೂರು: ಜಿಲ್ಲೆಯ ಗ್ರಾಮವೊಂದಕ್ಕೆ ಆಹಾರ ಅರಸಿಕೊಂಡು ಬಂದ ಆನೆಗಳು ಅವಾಂತರ ಸೃಷ್ಟಿಸಿವೆ.

ಮನೆಯೊಂದರ ಬಾಗಿಲು ಮುರಿದು ಒಳಗೆ ನುಗ್ಗಿದ ಆನೆ. ಮಬೆಯಲ್ಲಿದ್ದ ಅಕ್ಕಿಯನ್ನು ತಿಂದು ಮುಗಿಸಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಆನೆ ದಾಳಿಯಿಂದ ಪಾರಾಗಿದ್ದಾರೆ.

ಪ್ರಥಾಮಿಕ ಆರೋಗ್ಯ ಕೇಂದ್ರದ ಗೋಡೆಯನ್ನು ಕೂಡ ಆನೆಗಳು ಬೀಳಿಸಿದೆ. ಸುಮಾರು ಏಳು- ಎಂಟು ಆನೆಗಳು ಏಕಾಏಕಿ ಗ್ರಾಮಕ್ಕೆ ನುಗ್ಗಿ ಮನೆಗಳ ಮೇಲೆ ದಾಳಿ ಇಟ್ಟಿದೆ. ಈ ಸಂದರ್ಭದಲ್ಲಿ ಮನೆಯವರು ಮನೆಯೊಳಗಿದ್ದರು.

ನಂತರ ಅರಣ್ಯಧಿಕಾರಿಗಳು ಬಂದು ಪಟಾಕಿ, ಗಟ್ಟಿ ಶಬ್ದ ಮಾಡಿ ಆನೆಗಳನ್ನು ಹೆದರಿಸಿ ಕಾಡಿಗೆ ಅಟ್ಟಿದ್ದಾರೆ.

Latest Indian news

Popular Stories

error: Content is protected !!