ಮಲ್ಪೆ: ಹಿಂದೂ ಮುಸ್ಲಿಮರ ನಡುವೆ ದ್ವೇಷ ಭಾವನೆ ಸೃಷ್ಟಿಸುವ ವೀಡಿಯೋ ಮಾಡಿದ ಆರೋಪ: ಪ್ರಕಾಶ್ ಮಲ್ಪೆ ವಿರುದ್ಧ ಪ್ರಕರಣ ದಾಖಲು


ಮಲ್ಪೆ: ಹಿಂದೂ ಮುಸ್ಲಿಮರ ನಡುವೆ ದ್ವೇಷ ಭಾವನೆ ಸೃಷ್ಟಿಸುವ ವೀಡಿಯೋ ಎಡಿಟ್ ಮಾಡಿದ ಆರೋಪದ ಮೇಲೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ವಿ ಸಾಲ್ಯಾನ್ ಎಂಬುವವರು ದೂರು ನೀಡಿದ್ದು, ” ಈ ಹಿಂದೆ ಉಡುಪಿಯಲ್ಲಿ ಎಸ್ ಡಿ ಪಿ ಐ  ಸಂಘಟನೆಯವರು ನಡೆಸಿದ ಕಾನೂನು ವಿರೋಧಿ ಪ್ರತಿಭಟನೆಯ ವಿಡಿಯೋಗಳನ್ನು ಮತ್ತು ಸೈಂಟ್ ಮೆರಿಸ್ ದ್ವೀಪದಲ್ಲಿ ನಡೆದ ಘಟನೆಯ ವಿಡಿಯೋ ಗಳನ್ನು ಎಡಿಟ್ ಮಾಡಿ ಈ ಎರಡು ಘಟನೆಗಳಿಗೂ ಹಾಗೂ ಮಲ್ಪೆ ಸೈಂಟ್ ಮೆರಿಸ್ ದ್ವೀಪದ ಪ್ರವಾಸಿ ಸಂಸ್ಥೆ ಹಾಗೂ ಕೆಲಸಗಾರರ ಜೊತೆ ನನಗೆ ಯಾವುದೇ  ಸಂಬಂಧ ಇಲ್ಲದಿದ್ದರೂ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರ ಮಧ್ಯ ದ್ವೇಷ ಭಾವನೆ ಹುಟ್ಟುವಂತೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸುಳ್ಳು ಮಾಹಿತಿಯನ್ನು ಪ್ರಕಾಶ ಮಲ್ಪೆ ಎಂಬವರು ಆತನ ಮೊಬೈಲ್ ನ  ವ್ಯಾಟ್ಸಾಪ್ ಮೂಲಕ ಸಾರ್ವಜನಿಕವಾಗಿ ಹರಿಯಬಿಟ್ಟು ವೈರಲ್ ಮಾಡಿ ನನ್ನ ತೆಜೋವದೆಗೆ ಪ್ರಯತ್ನಿಸಿರುವುದಾಗಿ” ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಮಲ್ಪೆ ಕೊಳ ಎಂಬಲ್ಲಿ ಪ್ರಶ್ನೆ ಮಾಡಲು ಹೋದಾಗ ಪ್ರಕಾಶ ಮಲ್ಪೆ ಅವರು ವಿಡಿಯೋ ಮಾಡಿರುವುದು ನನ್ನ ಮೊಬೈಲ್ ನಲ್ಲಿ ಮತ್ತು ಇದು ನನ್ನ ಇಷ್ಟ ಎಂದು ಹೇಳಿ ಮಲ್ಪೆ ಪರಿಸರದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಪಿರ್ಯಾಧಿದಾರರಿಗೆ ಬೆದರಿಕೆ ಹಾಕಿದ್ದು ಪ್ರಕಾಶ ಮಲ್ಪೆ ಎಂಬವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2023  ಕಲಂ: 505(5), 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories