ಮಹಿಳೆ ಸೇರಿ ಹತ್ತು ಮಂದಿ ಪ್ಯಾಲೆಸ್ಟೈನ್ ನಾಗರಿಕರನ್ನ ಹತ್ಯೆಗೈದ ಇಸ್ರೇಲ್

ವೆಸ್ಟ್ ಬ್ಯಾಂಕ್: ಇಸ್ರೇಲ್-ಜೋರ್ಡಾನ್ ಗಡಿಯಲ್ಲಿರುವ ವೆಸ್ಟ್ ಬ್ಯಾಂಕ್ ನಗರದ ಜೆನಿನ್ ಮೇಲೆ ಗುರುವಾರ ಇಸ್ರೇಲ್ ಸೇನೆಯು ದಾಳಿ ನಡೆಸಿ 10 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ.

ಇಸ್ರೇಲ್ ಸೇನೆ ದಾಳಿ ಮಾಡಿದ್ದು ಅದರಲ್ಲಿ ಓರ್ವ ಮಹಿಳೆ ಸೇರಿದಂತೆ 10 ಮಂದಿ ಹತ್ಯೆಯಾಗಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಹೇಳಿದೆ. 


ವರದಿಯ ಪ್ರಕಾರ, ಪ್ಯಾಲೆಸ್ತೀನ್ ನಾಗರಿಕರು ಮತ್ತು ಇಸ್ರೇಲ್ ಸೇನೆಯ ನಡುವೆ ಗುರುವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ಭೀಕರ ಕಾಳಗ ನಡೆದಿತ್ತು. ಏತನ್ಮಧ್ಯೆ, ಕಿಕ್ಕಿರಿದ ನಗರ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳು ಸಂಭವಿಸಿವೆ.

ಅಡಗುತಾಣದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದು ಶಂಕಿತ ಮೂವರನ್ನು ಬಂಧಿಸಲು ವೆಸ್ಟ್ ಬ್ಯಾಂಕ್ ಗೆ ನುಗ್ಗಲಾಗಿತ್ತು ಎಂದು ಇಸ್ರೇಲಿ ಸೇನೆ ದಾಳಿಯನ್ನು ಸಮರ್ಥಿಸಿಕೊಂಡಿದೆ.

Latest Indian news

Popular Stories