ಮಾಜಿ ಗೃಹ ಸಚಿವ ಅನಿಲ್ ದೇಶ್’ಮುಖ್ ಹಣ ದಂಧೆ ಪ್ರಕರಣ: ಸಿಬಿಐನಿಂದ ಒರ್ವನ ಬಂಧನ

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಒಳಗೊಂಡ ಹಣ ದಂಧೆ ಪ್ರಕರಣ ಸಂಬಂಧ ಸಿಬಿಐ ಮೊದಲ ಬಂಧನ ಮಾಡಿದ್ದು, ಆಪಾದಿತ ಮಧ್ಯವರ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಥಾಣೆಯಿಂದ ಸಂತೋಷ್ ಜಗತಾಪ್ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಆತನ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾದ ನಂತರವೂ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಮಧ್ಯವರ್ತಿ ಎಂದು ಆರೋಪಿಸಲಾದ ಜಗತಾಪ್ ಮನೆ ಮೇಲೆ ದಾಳಿ ನಡೆಸಿ 9 ಲಕ್ಷ ರೂಪಾಯಿ ವಶಪಡಿಸಿಕೊಂಡಿತ್ತು.

Latest Indian news

Popular Stories

error: Content is protected !!