ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವಿಗೆ ಬಾಲಕಿಯೋರ್ವಳು ಹಣ ನೀಡಿದ ಘಟನೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಬಾಲಕಿಯೋರ್ವಳು ಸಿದ್ಧರಾಮಯ್ಯ ಅವರ ಗೆಲುವಿಗೆ ತಾನು ಕೂಡಿಟ್ಟಿದ್ದ 5 ಸಾವಿರ ರೂ. ಗಳನ್ನು ಸಿದ್ಧರಾಮಯ್ಯ ಅವರಿಗೆ ನೀಡಿದ್ದಾಳೆ.
ಜೀಯಾ ರಫೀಕ್ ಮಣೂರು ಹಣ ನೀಡಿದ ಬಾಲಕಿ. ಇನ್ನೂ
ಸಿದ್ದರಾಮಯ್ಯ ಗೆಲುವಿಗೆ ಜೀಯಾ ಹಣ ಕೂಡಿಟ್ಟಿದ್ದಳು ಇಂದು ಸಿಂದಗಿಗೆ ಸಿದ್ದರಾಮಯ್ಯ ಆಗಮಿಸಿದ ವೇಳೆ ಹಣ ನೀಡಿದ್ದಾಳೆ ಆಗ ಸಿದ್ಧರಾಮಯ್ಯ ಅವರು ನಿನ್ನ ವಿದ್ಯಾಭ್ಯಾಸಕ್ಕೆ ಹಣ ಇಟ್ಕೊಳ್ಳಮ್ಮ ಎಂದು ಮರಳಿ ಬಾಲಕಿಗೆ ಹಣ ನೀಡಿದರು.