ಮಾಧ್ಯಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡದೆ ತಪ್ಪುಗಳನ್ನು ಮಾಡಿದರೆ, ಸಮಾಜವು ಅಂತ್ಯಗೊಳ್ಳುತ್ತದೆ – ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಮಾಧ್ಯಮವು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು (ಮಾಧ್ಯಮ) ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡದೆ ತಪ್ಪುಗಳನ್ನು ಮಾಡಿದರೆ, ಸಮಾಜವು ಅಂತ್ಯಗೊಳ್ಳುತ್ತದೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಹೇಳಿದರು.

ಬೆಂಗಳೂರು ಪ್ರೆಸ್‌ ಕ್ಲಬ್‌ನ 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ‌ ಮಾತನಾಡಿದ ಅವರು, ‘ಪತ್ರಕರ್ತರು ಸಾಮಾಜಿಕ ನ್ಯಾಯದ ಜತೆಗೆ ಯಾವುದು ಸರಿಯಿದೆ? ಈ ದೇಶಕ್ಕೆ ಏನು ಅಗತ್ಯವಿದೆ? ಎನ್ನುವುದನ್ನೂ ಬರೆಯಬೇಕು’ ಎಂದು ಹೇಳಿದರು.

“ನಮಗಿಂತಲೂ (ವಿರೋಧ ಪಕ್ಷಗಳು), ಪ್ರಜಾಪ್ರಭುತ್ವವನ್ನು ಕಾಪಾಡುವ ಈ ಪರೀಕ್ಷೆಯ ಸಮಯದಲ್ಲಿ ಮಾಧ್ಯಮವು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಕೆಲವು ಕಾರ್ಪೊರೇಟ್‌ ಸೆಕ್ಟರ್’ಗಳು ಮಾಧ್ಯಮ ಸಂಸ್ಥೆ ಆರಂಭವಾದಾಗ ಸ್ವಲ್ಪ ಪಾಲನ್ನು ತೆಗೆದುಕೊಳ್ಳುತ್ತವೆ. ನಂತರ ಕ್ರಮೇಣ ಇಡೀ ಮಾಧ್ಯಮ ಸಂಸ್ಥೆಯನ್ನೇ ಖರೀದಿ ಮಾಡಿಬಿಡುತ್ತವೆ. ಆದರೆ ಸ್ವತಂತ್ರ ಪತ್ರಕರ್ತರು ಸುಮ್ಮನೆ ಕುಳಿತುಕೊಳ್ಳಬಾರದು… ಬದಲಿಗೆ ಅವರು ನೇರವಾಗಿ ಅಥವಾ ಪರೋಕ್ಷವಾಗಿ ಪತ್ರಿಕೋದ್ಯಮದ ನೀತಿಯನ್ನು ಎತ್ತಿಹಿಡಿಯಬೇಕು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಬಲಿಯಾಗಬಾರದು” ಎಂದು ತಿಳಿಸಿದರು.

ದೇಶದಲ್ಲಿ ಉದ್ಯೋಗಾವಕಾಶಗಳ ಕುರಿತು ಮಾತನಾಡಿದ ಅವರು, ರೈಲ್ವೆ, ರಕ್ಷಣೆ, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. “ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಇದು ಕೋಟಿಗಟ್ಟಲೆ ಜನರಿಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ ಎಂದರು.

Latest Indian news

Popular Stories