ಮಾನನಷ್ಟ ಮೊಕದ್ದಮೆ: ಜುಲೈ 4 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರಣಾವತ್ ಗೆ ಕೋರ್ಟ್ ಆದೇಶ

ಮುಂಬೈ: ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜುಲೈ 4 ರಂದು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗ ವಿಚಾರಣೆಗೆ ನಟಿ ಕಂಗನಾ ರಣಾವತ್ ಹಾಜರಾಗಲಿದ್ದಾರೆ.

ಸೋಮವಾರ ಈ ವಿಚಾರದ ವಿಚಾರಣೆಗೆ ಅಂದೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನಡೆಯಿತು. ಕಂಗನಾ ರಣಾವತ್ ಪರ ವಕೀಲರು ಆಕೆಯ ಹಾಜರಾತಿ ವಿನಾಯಿತಿಯನ್ನು ಬಯಸಿದರು.

ತದನಂತರ ಮುಂದಿನ ವಿಚಾರಣೆ ನಡೆಯುವ ಜುಲೈ 4 ರಂದು ಆರೋಪಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ರಣಾವತ್ ಪರ ಕಾನೂನು ತಂಡಕ್ಕೆ ನಿರ್ದೇಶನ ನೀಡಿತು. ರಣಾವತ್ ಪರ ವಕೀಲರು ಲಿಖಿತ ಹೇಳಿಕೆ ನಂತರ ಸೋಮವಾರದ ಹಾಜರಾತಿಗೆ ವಿನಾಯಿತಿಯನ್ನು ಕೋರ್ಟ್ ಅನುಮೋದಿಸಿತು.

ಮುಂದಿನ ವಿಚಾರಣೆಯವರೆಗೂ ರಣಾವತ್ ವಿರುದ್ಧ ವಾರೆಂಟ್ ಹೊರಡಿಸುವ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ. ಟಿವಿ ಸಂದರ್ಶನವೊಂದರಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆ ತರುವಂತಹ ಮಾನಹಾನಿಕಾರ ಹೇಳಿಕೆಗಳನ್ನು ರಣಾವತ್ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಖ್ತರ್ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

Latest Indian news

Popular Stories