ಮಿಕ್ಸಿ ಸ್ಫೋಟ ಪ್ರಕರಣ : ಪ್ರಮುಖ ಆರೋಪಿಯ ಬಂಧನ

ಹಾಸನ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಅನೂಪ್ ಕುಮಾರ್ ನನ್ನು ಬಂಧಿಸಲಾಗಿದೆ. ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದೇವೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದರು.
ಮಿಕ್ಸಿಯಲ್ಲಿ ಡೆಟೊನೆಟರ್ ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್ ನೆಟ್ ಸರ್ಚ್ ಮಾಡಿದ್ದಾನೆ. ರಾಮನಗರದಲ್ಲಿ ನಡೆಯುತ್ತಿರುವ ಕ್ವಾರಿಯಲ್ಲಿ ಎರಡು ಡೆಟೊನೆಟರ್ ತಂದಿದ್ದಾನೆ. ಡೆಟೊನೆಟರ್ ಕದ್ದಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಡಿ.16 ರಂದು ಪಾರ್ಸೆಲ್ ಕಳುಹಿಸಿದ್ದು, ಡಿ.26 ರಂದು ಮಿಕ್ಸಿ ಬ್ಲಾಸ್ಟ್ ಆಗಿತ್ತು. ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದೆಯಾ ಎಂದು ಡಿ.17 ರಿಂದಲೇ ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾನೆ. ಕೊರಿಯರ್ ಟ್ರ್ಯಾಕಿಂಗ್ ಐಡಿ ಡೆಲಿವರಿ ಆಗಿದೆಯಾ, ಬಾಂಬ್ ತಯಾರಿಕೆ ಬಗ್ಗೆಯೂ ಸರ್ಚ್ ಮಾಡಿದ್ದಾನೆ. ಡೆಟೊನೆಟರ್ ಬ್ಲಾಸ್ಟ್ ಮಾಡುವ ವಯರ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಲಘಟ್ಟಪುರದಲ್ಲಿರುವ ಆತನ ಮನೆಯಲ್ಲಿ ಮಿಕ್ಸಿಯ ಮೂರನೇ ಜಾರ್ ಸಿಕ್ಕಿದೆ. ನನ್ನ ಪ್ರೀತಿ ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದು, ತನಿಖೆ ವೇಳೆ ಅನೂಪ್ ಕುಮಾರ್ ಬ್ಲಾಸ್ಟ್ ಸ್ಕೆಚ್ ಕಹಾನಿ ಬಯಲಾಗಿದೆ.

Latest Indian news

Popular Stories