ಮುಂದಿನ ಐವತ್ತು ವರ್ಷದಲ್ಲಿ ಏನು ಮಾಡಬೇಕೆಂಬ ದೂರದೃಷ್ಟಿಯುಳ್ಳ ಪಕ್ಷಕ್ಕೆ ಮತ ನೀಡಬೇಕು – ಉಡುಪಿಯಲ್ಲಿ ಅಣ್ಣಾಮಲೈ

ಉಡುಪಿ: ನಾವು ತಾತ್ಕಾಲಿಕ ರಾಜಕೀಯ ವ್ಯವಸ್ಥೆಗೆ ಬದಲಾಗದೆ ಮುಂದಿನ 50 ವರ್ಷಗಳಲ್ಲಿ ಏನು ಮಾಡಬೇಕೆಂಬ ದೂರದೃಷ್ಟಿ ಬೆಳೆಸಿಕೊಳ್ಳಬೇಕು. ಅಂತಹ ದೃಷ್ಟಿಯುಳ್ಳ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಮಾತ್ರ ಇದು ಸಾಧ್ಯ ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಅವರು ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ “ವಿಶ್ವಾರ್ಪಣಮ್‌’ ಕಾರ್ಯಕ್ರಮ ಸರಣಿಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದರು.

ದೇಶರಕ್ಷಣೆ ಎಂದಾಗ ಬಾಹ್ಯ ರಕ್ಷಣೆ, ಆಂತರಿಕ ರಕ್ಷಣೆ ಎಂಬ ವರ್ಗೀಕರಣ ಇರುತ್ತದೆ. ಚೀನ ನೆರೆಯ ರಾಷ್ಟ್ರಗಳಲ್ಲಿ ವಸಾಹತು ಹೂಡಿ ಅಲ್ಲಿಂದ ಭಾರತಕ್ಕೆ ಬೆದರಿಕೆ ಒಡ್ಡುತ್ತಿದೆ. ಅವರನ್ನು ಬೆದರಿ ಸುವ ಕೆಲಸ ಭಾರತದಿಂದಲೂ ಆಗಬೇಕಾದರೆ ಬಹುಮತ ಇರುವ ಸರಕಾರ ಬೇಕು. ಸವಾಲನ್ನು ಎದುರಿಸುವ ನಾಯಕನೂ ಬೇಕು. ಈ ದೃಷ್ಟಿಯಿಂದಲೇ ಕೇಂದ್ರ ಸರಕಾರ ಸಿಡಿಎಸ್‌ ರಚನೆ ಮಾಡಿರುವುದು.

ಭಾರತ (ಶೇ. 5.7) ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮೆರಿಕ, ಫ್ರಾನ್ಸ್‌, ರಷ್ಯಾಗ ಳಿಂದ ಖರೀದಿಸುತ್ತಿದೆ. ಇದರಿಂದ ನಮಗೆ ತೊಂದರೆಯಾಗುವ ಸಾಧ್ಯತೆ ಇರು ವುದರಿಂದ ಭಾರತದಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದನೆ ಆಗುತ್ತಿದೆ. ಉ.ಪ್ರ.ದಲ್ಲಿ ಎಕೆ 56, ಬೆಂಗಳೂರಿನಲ್ಲಿ ತೇಜಸ್‌, ಅರ್ಜುನ್‌ ಟ್ಯಾಂಕ್‌ ಉತ್ಪಾದನೆ ಆರಂಭ ವಾಗಿದೆ. ಮುಂದೆ ಜಿಪಿಎಸ್‌ ಕೂಡ ಬರಲಿದೆ ಎಂದು ಅಣ್ಣಾಮಲೈ ಹೇಳಿದರು.

ಈಗ ಕೇಂದ್ರ ಸರಕಾರ ಹೆಮ್ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ವಿಪಕ್ಷಗಳು ವಿರೋಧ ಸೂಚಿಸುತ್ತಿವೆ. 18 ವರ್ಷಕ್ಕೇ ಮದುವೆಯಾಗಿ ಗರ್ಭಿಣಿ ಯಾಗುವುದಕ್ಕೂ 21ರ ಬಳಿಕ ಗರ್ಭಿಣಿ ಯಾಗುವುದಕ್ಕೂ ವ್ಯತ್ಯಾಸ ವಿಲ್ಲವೆ? ಆಕೆ ದುಡಿದು ತನ್ನ ಕಾಲ ಮೇಲೆ ನಿಂತ ಬಳಿಕ ಮದುವೆಯಾದರೆ ದೇಶಕ್ಕೆ ಒಳಿತಲ್ಲವೆ? ಈಗ ಒಂದು ಲಕ್ಷ ಮಕ್ಕಳು ಹುಟ್ಟಿದರೆ ಅದರಲ್ಲಿ 113 ತಾಯಂದಿರು 30 ದಿನಗಳೊಳಗೆ ಮೃತ
ರಾಗುತ್ತಿದ್ದಾರೆ. ಶೇ. 51ರಷ್ಟಿರುವ ಮಹಿಳೆಯರನ್ನು ನಾವು ಸಮರ್ಥವಾಗಿ ಉಪಯೋಗಿಸುತ್ತಿಲ್ಲ. ಇಂತಹ ನಿರ್ಧಾರ ಗಳನ್ನು ಸಮರ್ಥ ಸರಕಾರ ಕೈಗೊಳ್ಳದೆ ಇನ್ನಾರು ತೆಗೆದುಕೊಳ್ಳಬೇಕು ಎಂದು ಅಣ್ಣಾಮಲೈ ಪ್ರಶ್ನಿಸಿದರು.

ಶೇ. 60ರಷ್ಟಿರುವ ರೈತರು ತಮ್ಮ ಉತ್ಪಾದನೆಗಳಿಗೆ ಬೆಲೆ ನಿಗದಿಪಡಿಸುವ ಸ್ಥಿತಿ ಇಲ್ಲ. ಹೀಗಾದರೆ ಎಷ್ಟು ವರ್ಷ ರೈತರು ಕೃಷಿ ಮಾಡಬಹುದು? ಇದಕ್ಕಾಗಿ ತಯಾರಿಸಿದ ಮಸೂದೆಗೆ ಅಡ್ಡಿಪಡಿಸಿ ರೈತರಿಗೂ ವಿಷಯ ತಿಳಿಸದೆ ತಡೆಯುಂಟು ಮಾಡಿದರು. ಇನ್ನು 30 ವರ್ಷಗಳ ಅನಂತರ ರೈತರು ಕೃಷಿಯನ್ನು ಬಿಡುತ್ತಾರೆ. ಆಗ ಅಮೆರಿಕ, ಚೀನ, ವಿಯೆಟ್ನಾಂನಿಂದ ಅಕ್ಕಿ, ಗೋಧಿ, ಬಟಾಟೆ ತರಿಸಿಕೊಳ್ಳ ಬೇಕಾಗುತ್ತದೆ. ಜಾತಿ, ಮತ, ಭಾವನೆ ಗಳ ಜತೆ ಸುಲಭದಲ್ಲಿ ಗೆಲ್ಲುವ ರಾಜಕೀಯದವರಿಗೆ ಪ್ರಗತಿಪರ ರಾಜಕೀಯ ಅರ್ಥವಾಗುವುದಿಲ್ಲ ಎಂದು ಅಣ್ಣಾಮಲೈ ಹೇಳಿದರು.

Latest Indian news

Popular Stories

error: Content is protected !!