ಮುಂದಿನ ರಾಷ್ಟ್ರಪತಿಯಾಗಲಿದ್ದಾರೆಯೇ ಆರೀಫ್ ಮೊಹಮ್ಮದ್ ಖಾನ್? – ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆ

ಹಿಂದುಸ್ತಾನ್ ಗಝೆಟ್: ರಾಷ್ಟ್ರಪತಿ ಚುನಾವಣೆಯ ಘೋಷಣೆ ಆಗುತ್ತಿದ್ದಂತೆ ಇದೀಗ ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂಬ ಕುರಿತು ಚರ್ಚೆಗಳು ವ್ಯಾಪಕವಾಗಿ ನಡೆಯಲಾರಂಭಿಸಿದೆ.

ಕೇರಳದ ರಾಜ್ಯಪಾಲ ಆರೀಫ್ ಮುಹ್ಮದ್ ಖಾನ್ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು. ಪ್ರಧಾನಿ ನರೇಂದ್ರ ಮೋದಿಯ ಕಲಾಮ್ ಆರೀಫ್ ಮುಹಮ್ಮದ್ ಖಾನ್ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅಮಿತಾಭ್ ಬಚ್ಚನ್ ಅವರ ಹೆಸರು ಕೂಡ ಮುನ್ನಲೆಗೆ ಬರುತ್ತಿದೆ.

ಜಾತ್ಯತೀತ, ರಾಷ್ಟ್ರೀಯವಾದಿ ಎಂದು ಆರೀಫ್ ಮುಹಮ್ಮದ್ ಕುರಿತಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಇವರ ಹೆಸರನ್ನು ಸೂಚಿಸಿದರೆ ಏಕಮತಕ್ಕೆ ಬರಬಹುದೇ? ಎಂಬ ಕುರಿತು ಚರ್ಚೆಗಳು ಮುನ್ನಲೆಗೆ ಬಂದಿದೆ.

ಆರೀಫ್ ಮುಹಮ್ಮದ್ ಖಾನ್ ಕಾಂಗ್ರೆಸ್ ಮುಖಂಡರಾಗಿದ್ದರು. ರಾಜೀವ್ ಗಾಂಧಿ ಸಂಪುಟದಲ್ಲಿದ್ದಾಗ ಶಾಬಾನು ಪ್ರಕರಣದಲ್ಲಿ ರಾಜೀನಾಮೆ ನೀಡಿ ಹೊರ ನಡೆದಿದ್ದರು.

Latest Indian news

Popular Stories