ಮೈಸೂರು: ಈ ಬಾರಿಯ ಚುನಾವಣೆ ಅಹಿಂಸೆ ಮತ್ತು ಹಿಂಸೆಯ ನಡುವಿನ ಚುನಾವಣೆ. ಅಹಿಂಸೆ ಸಾರಿದ ಗಾಂಧಿ ಬೇಕಾ ಅವರನ್ನು ಕೊಂದ ಗೋಡ್ಸೆ ಬೇಕಾ ನಿರ್ಧರಿಸುವ ಚುನಾವಣೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಮೈಸೂರಿನಲಿ ಮಾತನಾಡಿದ ಅವರು, ಮುಸ್ಲಿಂಮರ ಜೊತೆ ಭ್ರಾತೃತ್ವ ಇರಲಿ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದು ಮೋದಿಯವರ ಮೊಸಳೆ ಕಣ್ಣೀರಿನಂತಿದೆ ಎಂದರು.
ಅವರ ಪಕ್ಷದ ಅಧ್ಯಕ್ಷರು ಈಗಾಗಲೇ ಹೇಳಿದ್ದಾರೆ ರಸ್ತೆ ಅಭಿವೃದ್ಧಿ ವಿಚಾರ ಬೇಕಿಲ್ಲ ಏನಿದ್ದರೂ ಲವ್ ಜಿಹಾದ್ ಧರ್ಮದ ವಿಚಾರದ ಚುನಾವಣೆ ಅಂತ ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದರು.