ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ ನಿಲ್ಲಿಸಿ;
ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್

ನವದೆಹಲಿ: ಬಿಜೆಪಿ ಮುಖಂಡರು, ನಾಯಕರು ಮುಸ್ಲಿಂ
ಸಮುದಾಯದ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ
ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ
ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
ಸಭೆಯ ಎರಡನೇ ದಿನದಂದು ಪ್ರಧಾನಿ ನರೇಂದ್ರ
ಮೋದಿ ಮಾತನಾಡಿ, ದೇಶದ ಅನೇಕ ಸಮುದಾಯಗಳು
ಬಿಜೆಪಿಗೆ ಮತ ಹಾಕುವುದಿಲ್ಲ. ಆದರೆ ಅವರು (ಬಿಜೆಪಿ
ಕಾರ್ಯಕರ್ತರು) ಅವರಿಗೆ ಅಗೌರವ ತೋರದೆ, ಉತ್ತಮ
ಸಮನ್ವಯವನ್ನು ಸ್ಥಾಪಿಸಿ ಉತ್ತಮ ನಡವಳಿಕೆಯನ್ನು
ರೂಪಿಸಬೇಕು ಎಂದು ಹೇಳಿದರು.

ಮುಸ್ಲಿಂ ಸಮಾಜದ ಬಗ್ಗೆ ತಪ್ಪು ಹೇಳಿಕೆಗಳನ್ನ
ನೀಡಬೇಡಿ. ಪಸ್ಮಾಂಡ ಮತ್ತು ಬೋರ ಸಮಾಜವನ್ನ
ಭೇಟಿಯಾಗಬೇಕು. ಕಾರ್ಮಿಕರೊಂದಿಗೆ ಸಂವಹನ ನಡೆಸಿ,
ಸಮಾಜದ ಎಲ್ಲಾ ವರ್ಗಗಳನ್ನ ಭೇಟಿ ಮಾಡಿ, ಅವರು
ನಮಗೆ ಮತ ಚಲಾಯಿಸುತ್ತಾರೋ ಅಥವಾ ಇಲ್ಲವೋ
ಎನ್ನುವುದು ಮುಖ್ಯಲ್ಲ. ಅವರನ್ನು ಭೇಟಿ ಮಾಡಿ, ಪಕ್ಷದ
ಅನೇಕರು ಈಗಲೂ ತಾವು ವಿರೋಧ ಪಕ್ಷದಲ್ಲಿದ್ದೇವೆ
ಎಂಬ ಭಾವನೆಯಲ್ಲಿದ್ದಾರೆ. ಪಕ್ಷದ ಅನೇಕ ಜನರು ಸಭ್ಯ
ಭಾಷೆಯಲ್ಲಿ ಮಾತನಾಡಬೇಕು ಎಂದು ಹೇಳಿದರು.

Latest Indian news

Popular Stories