ಭೋಪಾಲ್: ಬುಡಕಟ್ಟು ಸಮುದಾಯದ ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ ಘಟನೆ ಮಧ್ಯಪ್ರದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಆ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆದು ಪಾದಪೂಜೆ ಮಾಡಿದ್ದಾರೆ.
ಬುಡಕಟ್ಟು ಸಮಾಜದ ಕಾರ್ಮಿಕ ದಶ್ಮೇಶ್ ರಾವತ್ ಅವರನ್ನು ಇಂದು ಸಿಎಂ ಚೌಹಾಣ್ ತಮ್ಮ ನಿವಾಸಕ್ಕೆ ಕರೆಸಿದ್ದಾರೆ. ಬಳಿಕ ಆತನ ಪಾದಪೂಜೆ ಮಾಡಿ ಸನ್ಮಾನಿಸಿದ್ದಾರೆ. ‘ನಿಮ್ಮ ವಿಡಿಯೋ ನೋಡಿ ನನಗೆ ಬೇಸರವಾಯಿತು. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ನಿಮ್ಮಂತಹ ಜನರು ನನಗೆ ದೇವರಂತೆ’ ಎಂದರು.
ಬಳಿಕ ದಶ್ಮೇಶ್ ರಾವತ್ ನನ್ನು ಪಕ್ಕದ ಸ್ಮಾರ್ಟ್ ಸಿಟಿ ಪಾರ್ಕ್ ಗೆ ಕರೆದುಕೊಂಡು ಹೋದ ಸಿಎಂ ಚೌಹಾಣ್, ಅಲ್ಲಿ ಗಿಡವೊಂದನ್ನು ನೆಟ್ಟರು.