ಮೆಟ್ಟಿಲುಗಳ ಮೇಲೆ ಬಿದ್ದ ಲಾಲು ಪ್ರಸಾದ್ ಯಾದವ್: ಭುಜದ ಮೂಳೆ ಮುರಿತ

ಪಾಟ್ನಾ: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಪಾಟ್ನಾದಲ್ಲಿರುವ ರಾಬ್ರಿದೇವಿ ಅವರ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದಿದ್ದು, ಅವರ ಭುಜದಲ್ಲಿ ಮುರಿತ ಉಂಟಾಗಿದೆ.

ವಯೋಸಹಜ, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್‌ ಅವರು ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಅವಘಡ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಅವರ ಭುಜದಲ್ಲಿ ಮುರಿತವಾಗಿರುವುದು ಎಂಆರ್ ಐ ಪರೀಕ್ಷೆಗಳಿಂದ ಗೊತ್ತಾಗಿದೆ. ಭುಜ ಹೊಂದಿಕೊಳ್ಳಲೆಂದು ಅವರಿಗೆ ಕಟ್ಟು ಹಾಕಲಾಗಿದೆ. ಭುಜದ ಮುರಿತ ಮತ್ತು ಬೆನ್ನಿನ ಗಾಯದ ಹೊರತಾಗಿ ಅವರಿಗೆ ಇನ್ಯಾವುದೇ ಸಮಸ್ಯೆಯಾಗಿಲ್ಲ ಎಂದೂ ಮಾಹಿತಿ ಲಭ್ಯವಾಗಿದೆ.

Latest Indian news

Popular Stories