ರಿ-ಭೋಯ್ (ಮೇಘಾಲಯ): ಭಾನುವಾರ ತಡರಾತ್ರಿ ಮೇಘಾಲಯದ ನೊಂಗ್‌ಪೋಹ್‌ನಲ್ಲಿ 3.2 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
NCS ಪ್ರಕಾರ, , ಭಾನುವಾರ ರಾತ್ರಿ 11.28 ಕ್ಕೆ ಮೇಘಾಲಯದಿಂದ 60 ಕಿಲೋಮೀಟರ್ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದಿದೆ.
ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ನಷ್ಟ ಸಂಭವಿಸಿರುವುದರ ಬಗ್ಗೆ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಇನ್ನೂ ದೃಢಪಡಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಇದಕ್ಕೂ ಮುನ್ನ ಹೊಸ ವರ್ಷದ ಸಂದರ್ಭದಲ್ಲಿದ್ದ ದೆಹಲಿಯಲ್ಲಿ ಎರಡು ಬಾರಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆಯೂ ಭೂಕಂಪ ಸಂಭವಿಸಿತ್ತು. ಭೂಕಂಪದ ತೀವ್ರತೆಯನ್ನು 3.8 ಎಂದು ಹೇಳಲಾಗಿದೆ.