ಮೇ 10 ರಂದು ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು : ಮೇ 10 ರಂದು ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತೆರಳುವುದಕ್ಕೆ ರಜೆ ಸಿಗುತ್ತದೆಯೋ
ಇಲ್ಲವೋ ಎಂಬ ಚಿಂತೆಯಲ್ಲಿರುವವರಿಗೆ ಒಳ್ಳೆಯ‌ಸುದ್ದಿ ಸಿಕ್ಕಿದೆ. ಅಂದಿನ ಚುನಾವಣೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು,ಸಂಘ-ಸಂಸ್ಥೆಗಳಿಗೆ ಘೋಷಣೆ ಮಾಡಲಾಗಿದೆ.

ಸಾರ್ವತ್ರಿಕ ರಜೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಎಲ್ಲಾ ನೌಕರರು ಹಾಜರಾಗತಕ್ಕದ್ದು. ಮತಗಟ್ಟೆಯನ್ನು ಸರ್ಕಾರಿ ಕಚೇರಿ/ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅವುಗಳಿಗೆ ಮೇ 9 ಮತ್ತು 13 ರಂದು ಮತ ಏಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

Latest Indian news

Popular Stories