ಮೇ 14 ರಂದು ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶ – ಭರದಲ್ಲಿ ಸಾಗುತ್ತಿದೆ ಸಿದ್ಧತೆ

ಉಡುಪಿ: ಧಾರ್ಮಿಕ ಸಂಘರ್ಷದ ಕೇಂದ್ರ ಬಿಂದುವಾಗಿ ರೂಪುಗೊಂಡ ಉಡುಪಿಯಲ್ಲಿ ಇದೀಗ ಸಾಮರಸ್ಯದ ಸಂದೇಶ ನೀಡಲು ಉಡುಪಿಯ ಸಹಬಾಳ್ವೆಯ ತಂಡ ಸಜ್ಜಾಗಿದೆ. ಮೇ 14 ರ ಶನಿವಾರ ಸಾಮರಸ್ಯ ನಡಿಗೆ ಮತ್ತು ಸಮಾವೇಶ ನಡೆಯಲಿದ್ದು ಈ ಬೃಹತ್ ಕಾರ್ಯಕ್ರಮದಲ್ಲಿ ರಾಜ್ಯ ವಿವಿಧ ಜಾತಿ,ಮತ,ಧರ್ಮದ ಗುರುಗಳು ಭಾಗವಹಿಸಿ ಸಾಮರಸ್ಯ ಸಂದೇಶ ನೀಡಲಿದ್ದಾರೆಂದು ಪ್ರೊ.ಫಣಿರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸೌಹಾರ್ದ ನಡಿಗೆಯು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಅಜ್ಜಾರಕಾಡು ಹುತಾತ್ಮ ಚೌಕದಿಂದ ಪ್ರಾರಂಭವಾಗಿ- ಜೋಡುಕಟ್ಟೆ- ಕೋರ್ಟ್ ರಸ್ತೆ- ಡಯಾನ ವೃತ್ತ-ತ್ರಿವೇಣಿ ವೃತ್ತ- ಕ್ಲಾಕ್ ಟವರ್- ಕೆದಿಯೂರ್ ಹೋಟೆಲಿನ ಎದುರಿನ ಅಡ್ಡ ರಸ್ತೆ- ಸರ್ವಿಸ್ ಬಸ್ ಸ್ಟ್ಯಾಂಡ್ ಪಕ್ಕದ ರಸ್ತೆ- ಕ್ಲಾಕ್ ಟವರ್ ಎಡ ರಸ್ತೆ- ತ್ರಿವೇಣಿ ವೃತ್ತ- ಡಯಾನ ವೃತ್ತ- ಹಳೆ ತಾಲೂಕು ಕಚೇರಿ ವೃತ್ತ- ಮಿಷನ್ ಆಸ್ಪತ್ರೆ ರಸ್ತೆ- ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಕೊನೆಗೊಳ್ಳುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವನೆಯನ್ನು ವಿನಯ್ ಶ್ರೀನಿವಾಸನ್ ( ಬಹುತ್ವ ಕರ್ನಾಟಕ) ನಡೆಸಿಕೊಡಲಿದ್ದಾರೆ. ಸಹಭಾಗಿಯಾಗಿರುವ ಕರ್ನಾಟಕದ ಸೌಹಾರ್ದ ಸಂಘಟನೆಗಳ ಮುಂದಾಳುಗಳಾದ, ಸುಂದರ ಮಾಸ್ಟರ್ (ದಸಂಸ),ಮಾವಳ್ಳಿ ಶಂಕರ್,(ದ.ಸಂ.ಸ ಮುಖಂಡರು),ಆರ್. ಮೋಹನ್ ರಾಜ್,(ದ.ಸಂ.ಸ ಮುಖಂಡರು),ಹೆಚ್.ಆರ್ ಬಸವರಾಜಪ್ಪ (ರೈತ ಮುಖಂಡರು),ಚಾಮರಸ ಮಾಲಿ ಪಾಟೀಲ್ (ರೈತ ಮುಖಂಡರು),ಚುಕ್ಕಿ ನಂಜುಂಡಸ್ವಾಮಿ (ರೈತ ಮುಖಂಡರು,ಕೆ. ನೀಲಾ (ಮಹಿಳಾ ಹಕ್ಕು ಹೋರಾಟಗಾರರು),ಡಾ| ಬೆಳಗಾಮಿ ಮಹಮ್ಮದ್ ಸಾದ್ (ಮುಸ್ಲಿಂ ಸಮುದಾಯದ ಮುಖಂಡರು),ಸಬೀಹ ಫಾತಿಮ (ಉಪಸಂಪಾದಕರು, ಅನುಪಮ ಮಾಸಿಕ),ನಜ್ಮಾ ಚಿಕ್ಕನೇರಳೆ (ಯುವ ಹೋರಾಟಗಾರರು) ಭಾಗವಹಿಸಲಿದ್ದಾರೆ.

ಸಹಬಾಳ್ವೆ ಸಮಾವೇಶ (ಸಂಜೆ 4 ಗಂಟೆಯಿಂದ)
ಸ್ಥಳ: ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನ, ಉಡುಪಿಯಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ಯೋಗೆಂದ್ರ ಯಾದವ್(ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರರು),ಡಾ| ರೊನಾಲ್ಡ್ ಕೊಲಾಸೂ(ಅಧ್ಯಕ್ಷರು ಕರ್ನಾಟಕ ಕ್ರೈಸ್ತ ಸಂಘ-ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟ), ಶಶಿಕಾಂತ್ ಸೆಂಥಿಲ್(ನಿವೃತ್ತ ಐ.ಎ.ಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತರು),ಶ್ರೀ ಶ್ರೀ ಶ್ರೀ ಗುರುಬಸವ ಪಟ್ಟದೇವರು(ಹಿರೇಮಠ ಸಂಸ್ಥಾನ),ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ,(ಪುತ್ತಿಗೆ ಮಠ ಉಡುಪಿ, ಉಪೇಂದ್ರ ತೀರ್ಥ ಸಂಸ್ಥಾನ),ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ (ಗೌರವಾನ್ವಿತ ಖಾಜಿಗಳು, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಸಂಯುಕ್ತ ಜಮಾತ್),ಅ.ವಂ.ಜೀ. ವರ್ಗೀಸ್ ಮಾರ್ ಮಕರಿಯೋಸ್(ಪುತ್ತೂರು ಮಲಂಕರ ಕ್ಯಾಥೊಲಿಕ್ ಚರ್ಚ್ ಬಿಷಪ್ ರು),ಡಾ| ಮಾತೆ ಬಸವಾಂಜಲಿ ದೇವಿ(ಬಸವ ಜ್ಞಾನ ಮಂದಿರ ಮೈಸೂರು),ಶ್ರೀ ಶ್ರೀ ಶ್ರೀ ಬಸವಪ್ರಕಾಶ್ ಸ್ವಾಮೀಜಿ (ಬಸವ ಧರ್ಮ ಪೀಠ, ಬಸವ ಮಂಟಪ, ಬೆಳಗಾವಿ),ಭಂತೆ ಮಾತೆ ಮೈತ್ರಿ (ಲೋಕರತ್ನ ಬುದ್ದ ವಿಹಾರ, ಬೆಂಗಳೂರು),ಮೌಲಾನ ಇಪ್ತಿಕಾರ್ ಅಹ್ಮದ್ ಕಾಸ್ಮಿ (ಅಧ್ಯಕ್ಷರು ಜಮಿಯ್ಯತುಲ್ ಉಲೆಮಾಯೆ ಹಿಂದ್ ಕರ್ನಾಟಕ ),ಡಾ| ಎಂ. ಎಸ್. ಎಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ (ಅಧ್ಯಕ್ಷರು, ಸುನ್ನಿ ಯುವಜನ ಸಂಘ, ಕರ್ನಾಟಕ ),ರೆವರೆಂಡ್ ಡಾ. ಹಾಬರ್ಟ್ ಎಂ ವಾಟ್ಸನ್(ಪ್ರಾಂಶುಪಾಲರು, ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ),ಮೌಲಾನ ಯು ಕೆ ಅಬ್ದುಲ್ ಅಝೀಜ್ ದಾರಿಮಿ, ಚೊಕ್ಕಬೆಟ್ಟು (ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ದಾರಿಮಿ ಉಲೆಮಾ ಒಕ್ಕೂಟ),ಫಾದರ್ ಚೇತನ್ ಲೋಬೊ (ಸಾರ್ವಜನಿಕ ಸಂಪರ್ಕಾಧಿಕಾರಿ, ಉಡುಪಿ ಧರ್ಮಪ್ರಾಂತ್ಯ ),ಗ್ಯಾನಿ ಬಲರಾಜ್ ಸಿಂಗ್, (ಗುರುದ್ವಾರ ಮಣಿಪಾಲ),ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ
ಪೀಠಾಧಿಪತಿಗಳು, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು, ಬೆಂಗಳೂರು ಭಾಗವಹಿಸಲಿದ್ದಾರೆ.

ಸಾಮರಸ್ಯ ನಡಿಗೆಯಲ್ಲಿ ನಾಡಿನ ಮಹಾನ್ ವ್ಯಕ್ತಿತ್ವಗಳಾದ ನಾರಾಯಣ ಗುರುಗಳು, ಡಾ. ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ.ಟಿ.ಎಂ.ಎ.ಪೈ ಅವರ ಪ್ರಾತ್ಯಕ್ಷಿಕೆಗಳು, ಕರ್ನಾಟಕದ ಕರಾವಳಿಯ ಸಂಸ್ಕೃತಿಯನ್ನು ಪ್ರತಿಧ್ವನಿಸುವ ಕಲಾ ತಂಡಗಳು, ಏಳು ಬಣ್ಣಗಳ ಪತಾಕೆ ಹಾಗು ರಾಷ್ಟ್ರ ಧ್ವಜವನ್ನು ಹಿಡಿದ ಕರ್ನಾಟಕಾದಾಧ್ಯಂತದ ಹಲವು ಸಹಸ್ರ ಸೌಹಾರ್ದಪ್ರಿಯ ನಾಗರಿಕರ ಶಾಂತಿಯುತ ಶಿಸ್ತಿನ ಸಾಲು ಇವುಗಳು ಇರುತ್ತವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಮ್.ಡಿ ಪಲ್ಲವಿ ಅವರ ತಂಡ ಸೌಹಾರ್ದ ಗಾಯನ ನಡೆಸಿಕೊಡಲಿದೆ. ಈಗಾಗಲೇ ಕಾರ್ಯಕ್ರಮದ ಸಿದ್ಧತೆ ಭರದಲ್ಲಿ ಸಾಗುತ್ತಿದ್ದು ಕಾಟೌಟ್ ಗಳು ಉಡುಪಿ ನಗರದಲ್ಲಿ ರಾರಜಿಸುತ್ತಿದೆ. ಸುಮಾರು 20 ರಿಂದ 25 ಸಾವಿರ ಮಂದಿ ಭಾಗವಹಿಸಲಿದ್ದು ಯಾವುದೇ ಸಂಘಟನೆ, ಪಕ್ಷದ ಧ್ವಜ, ಬ್ಯಾನರ್ ಗಳಿಗೆ ಅಸ್ಪದ ಇಲ್ಲ. ಇಲ್ಲಿ ಕೇವಲ ತ್ರಿವರ್ಣ ಧ್ವಜದೊಂದಿಗೆ ಎಲ್ಲರೂ ಒಂದು ಎಂಬ ಸಂದೇಶ ನೀಡಲಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸುಂದರ್ ಮಾಸ್ತರ್, ಇಬ್ರಾಹಿಮ್ ಕೋಟ, ಬಾಲಕೃಷ್ಣ ಶೆಟ್ಟಿ, ಫಾ. ವಿಲಿಯಂ ಮಾರ್ಟಿಸ್, ವೆರೋನಿಕಾ ಕರ್ನೆಲಿಯೊ, ಶ್ಯಾಮ್ ರಾಜ್ ಬಿರ್ತಿ, ಪ್ರಶಾಂತ್ ಮೊಗವೀರ ಉಪಸ್ಥಿತರಿದ್ದರು.

Latest Indian news

Popular Stories