ಮೇ 2 ನೇ ವಾರದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ಸಾಧ್ಯತೆ?

ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ತಯಾರಿ ರಾಜ್ಯದಲ್ಲಿ ಜೋರಾಗಿ ನಡೆಯುತ್ತಿದೆ. ಪಕ್ಷಗಳು ಈಗಾಗಲೇ ಅಖಾಡಕ್ಕೆ ಇಳಿದಿದ್ದು ಕಾಂಗ್ರೆಸ್, ಬಿಜೆಪಿ,ಜೆ.ಡಿ‌ಎಸ್ ಜನ ಮತ ಸೆಳೆಯಲು ಶುರು ಮಾಡಿಕೊಂಡಿದೆ.

ಈತನ್ಮಧ್ಯೆ ಜನರ ಚಿತ್ತ ಚುನಾವಣಾ ಆಯೋಗದತ್ತವಿದ್ದು ಯಾವಾಗ ಚುನಾವಣೆ ದಿನಾಂಕ ಘೋಷಣೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಹಾಲಿ ವಿಧಾನಸಭೆಯ ಅವಧಿ ಈ ವರ್ಷ ಮೇ 24ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಮೇ 2 ನೇ ವಾರದಲ್ಲಿ ಆಯೋಗವು ಚುನಾವಣೆ ನಡೆಸುವ ಸಾಧ್ಯತೆ ಇದೆ.

ಮೇ 24 ರ ಒಳಗೆ ಹೊಸ ವಿಧಾನಸಭೆ ರಚನೆ ಯಾಗಬೇಕು. ಕಳೆದ ಬಾರಿ, 2018ರಲ್ಲಿ ಮೇ 12ರಂದು ಮತದಾನ ನಡೆದಿತ್ತು. ಹೆಚ್ಚುಕಡಿಮೆ ಈ ಬಾರಿಯೂ ಇದೇ ಅವಧಿಯಲ್ಲಿ ನಡೆಯಬಹುದು. ಇದೇ ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈಗ ಚುನಾವಣೆ ಸಿದ್ಧತೆಗಳಿಗೆ ಮತ್ತಷ್ಟು ವೇಗ ನೀಡಿದೆ.

ಚುನಾವಣ ಪ್ರಕ್ರಿಯೆಗೆ 3 ಲಕ್ಷ ಸಿಬಂದಿ ಅಗತ್ಯವಿದ್ದು, ಬಹುತೇಕ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿ ಸಲಾಗುತ್ತದೆ. ಮಾ. 9ರಿಂದ 29ರ ವರೆಗೆ ದ್ವಿತೀಯ ಪಿಯುಸಿ ಮತ್ತು ಮಾ. 31ರಿಂದ ಎ.15ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಇದರ ಬಳಿಕವಷ್ಟೇ ಚುನಾವಣೆ ಎಂದು ಚುನಾವಣ ಆಯೋಗದ ಅಧಿಕಾರಿ ಗಳು ಹೇಳಿದ್ದಾರೆ.

Latest Indian news

Popular Stories