ಮೋದಿ ಕೇರ್‌ ಚೈನ್‌ ಲಿಂಕ್‌ ವ್ಯವಹಾರದಲ್ಲಿ ಭಾಗಿ; 8 ಶಿಕ್ಷಕರು ಅಮಾನತು

ಚಿತ್ರದುರ್ಗ : ಮೋದಿ ಕೇರ್‌ ಚೈನ್‌ ಲಿಂಕ್‌ ವ್ಯವಹಾರದಲ್ಲಿ ಭಾಗಿಯಾದ ಆರೋಪದಡಿ ಜಿಲ್ಲೆಯ ಎಂಟು ಮಂದಿ ಸರಕಾರಿ ಶಾಲಾ ಶಿಕ್ಷಕರನ್ನು ಡಿಡಿಪಿಐ ಕೆ. ರವಿಶಂಕರ್‌ ರೆಡ್ಡಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 500 ಶಿಕ್ಷಕರು ಈ ವ್ಯವಹಾರ ನಡೆಸುತ್ತಿದ್ದಾರೆ ಎಂದು ಹೊಳಲ್ಕೆರೆಯ ಕೆ. ಮಲ್ಲಿಕಾರ್ಜುನ್‌ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಜರಗಿಸಿದೆ. ಇಲಾಖೆ ಆಯುಕ್ತರ ಸೂಚನೆಯಂತೆ 16 ಶಿಕ್ಷಕರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಫೆ.1ರಂದು ಚಿತ್ರದುರ್ಗದ ಡಯಟ್‌ನಲ್ಲಿ ಈ ಶಿಕ್ಷಕರ ಜಂಟಿ ವಿಚಾರಣೆ ನಡೆಸಲಾಯಿತು. ಎಂಟು ಶಿಕ್ಷಕರು ಖಾಸಗಿ ವ್ಯವಹಾರದಲ್ಲಿ ಪಾಲ್ಗೊಂಡಿರುವುದು ವಿಚಾರಣೆ ವೇಳೆ ಸಾಬೀತಾಗಿತ್ತು.

Latest Indian news

Popular Stories