ಮ್ಯಾನ್ಮಾರ್ ನಾಯಕಿ ಸೂಕಿ ವಿರುದ್ಧದ ಆರೋಪ ಸಾಬೀತು : ಶಿಕ್ಷೆ

ಯಾಂಗೂನ್: 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ಎಸಗಿರುವುದಾಗಿ ಆರೋಪ ಹೊರಿಸಿ ಮ್ಯಾನ್ಮಾರ್ ನಾಯಕಿ ಆನ್ ಸಾನ್ ಸೂಕಿ ಸರ್ಕಾರವನ್ನು ಕಿತ್ತೊಗೆದ ಸೇನೆ, ಅವರ ಆರೋಪ ಸಾಬೀತಾಗಿರುವುದಾಗಿ ತನ್ನ ಅಧೀನದಲ್ಲಿರುವ ಸುದ್ದಿ ವಾಹಿನಿ ಮೂಲಕ ಸುದ್ದಿ ಬಿತ್ತರಿಸಿದೆ.

ಕಳೆದ ವರ್ಷ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಯಕಿ ಆನ್ ಸಾನ್ ಸೂಕಿ ಅವರು ಭರ್ಜರಿ ಜಯ ದಾಖಲಿಸಿದ್ದರು. ಮತ್ತೆ ದೇಶದ ಅಧ್ಯಕ್ಷೆ ಸ್ಥಾನಕ್ಕೆ ಅವರು ಏರಲಿದ್ದರು.

ಅದಕ್ಕೂ ಮೊದಲೇ ಸೇನೆ ಚುನಾವಣೆಯಲ್ಲಿ ಸೂಕಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಿತು. ನಂತರ ಸೂಕಿ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಬಂಧಿಸಿ ದೇಶದಲ್ಲಿ ಸೇನಾಡಳಿತ ಹೇರಲಾಗಿತ್ತು.

ಜನರು ಸೇನಾಡಳಿತ ವಿರೋಧಿಸಿ, ಸೂಕಿಯವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭೀಕರ ಪ್ರತಿಭಟನೆ ನಡೆಸಿದ್ದರು. ಸೂಕಿ ವಿರುದ್ಧದ ನ್ಯಾಯಾಲಯ ವಿಚಾರಣೆ ನಡೆಯುತ್ತಿತ್ತು. ಇದೀಗ 76 ವರ್ಷದ ಸೂಕಿ ಅವರು ಚುನಾವಣೆ ಅಕ್ರಮ ಎಸಗಿದ್ದು ಸಾಬೀತಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಶಿಕ್ಷಾ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಂದಿನ ನ್ಯಾಯಾಲಯ ವಿಚಾರಣೆಯಲ್ಲಿ ಅದು ತಿಳಿದುಬರಲಿದೆ ಎನ್ನಲಾಗುತ್ತಿದೆ. ದಶಕಗಲ ಕಾಲ ಸೂಕಿಗೆ ಜೈಲಾಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

Latest Indian news

Popular Stories

error: Content is protected !!