ಯಾದಗಿರಿ: ಮತಾಂತರದ ಆರೋಪ ಹೊರಿಸಿ ನಾಲ್ವರ ಬಂಧನ

ಯಾದಗಿರಿ: ಯಾದಗಿರಿಯ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರ ಬಲವಂತದ ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ನಾಲ್ವರನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರನ್ನು ‘ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಪಿಐ ವಿಜಯ ಕುಮಾರ ತಿಳಿಸಿದ್ದಾರೆ.

ಇದೀಗ ಪ್ರತಿ ದೂರಿಗೆ ಹೆದರಿ ಕೆಲ ಯುವಕರು ಪ್ರತಿಭಟನೆ ನಡೆಸಿರುವ ಕುರಿತು ವರದಿಯಾಗಿದೆ.

Latest Indian news

Popular Stories