ವಿಜಯಪುರ: ಹುಡುಗಿ ವಿಚಾರಕ್ಕೆ ಇಬ್ಬರ ತಲೆ ಬೋಳಿಸಿ ಮೆರವಣಿಗೆ ಪ್ರಕರಣದಲ್ಲಿ ಏಳು ಜನರ ವಿರುದ್ಧ ಕೇಸ್ ದಾಖಲಾಗಿದೆ.
ವಿಜಯಪುರ ತಾಲ್ಲೂಕಿನ ಹೆಗಡಿಹಾಳ ತಾಂಡಾದ ಬಸವ ನಗರದಲ್ಲಿ ಶುಕ್ರವಾರ ತೇಜು ಚವ್ಹಾಣ, ರಾಜು ಚವ್ಹಾಣ ತಲೆ ಬೋಳಿಸಿ, ಮೆರವಣಿಗೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿ 7 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನಿಲ್ ಲಮಾಣಿ, ಮಂಗೇಶ್, ಹೇಮು, ರಮೇಶ, ರಾಜು, ಚನ್ನು, ರಾಮಸಿಂಗ್ ಲಮಾಣಿ ಬಂಧಿತರು ಆರೋಪಿಗಳು.
ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.