ಯೋಗಿ ಬುಲ್ಡೋಝರ್’ಗಳ ಅಧಿಪತಿ – ಕಾಂಗ್ರೆಸ್

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್ ನಾಥ್ ಅಥವಾ ಬುಲ್ಡೋಜರ್ ಗಳ ಅಧಿಪತಿ ಎಂದು ಕಾಂಗ್ರೆಸ್ ಅಣಕಿಸಿದೆ.

ಲಕ್ನೋದಲ್ಲಿ ಲಡಕೀ ಹೋ.. ಲಡ್ ಸಕ್ತಿ ಹೋ ಎಂಬ ಶೀರ್ಷಿಕೆಯಡಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ಮ್ಯಾರನಾಥ್‍ಗೆ ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಯುಪಿ ಸರ್ಕಾರದ ಮೇಲೆ ಕಿಡಿಕಾರಿದ್ದು, ಇದು ಹುಡುಗಿಯರ ಕನಸುಗಳನ್ನು ನಾಶ ಮಾಡಿದೆ ಎಂದು ಹೇಳುವ ಮೂಲಕ ಝಾನ್ಸಿಯಲ್ಲಿ ಮಹಿಳಾ ಮ್ಯಾರಾಥಾನ್ ಆಯೋಜಿಸುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಯುಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ಹುಡುಗಿಯರು ಯುಪಿ ಸರ್ಕಾರದ ಈ ನಡೆಯನ್ನು ಸಹಿಸುವುದಿಲ್ಲ, ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಯುಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ಹುಡುಗಿಯರು ಯುಪಿ ಸರ್ಕಾರದ ಈ ನಡೆಯನ್ನು ಸಹಿಸುವುದಿಲ್ಲ, ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎಂದು ಹೇಳಿದ್ದಾರೆ.

ಮಹಿಳಾ ಮ್ಯಾರಥಾನ್‍ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಝಾನ್ಸಿಯಿಂದ ಬಂದ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಲಕ್ಷ್ಮೀಬಾಯಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗುಪ್ತಾ ಹೇಳಿದ್ದಾರೆ.ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಕೇವಲ ಮ್ಯಾರಾಥಾನ್‍ಗೆ ಮಾತ್ರ ಸೀಮಿತಗೊಳಿಸುವುದಿಲ್ಲ, ರಾಜಕೀಯದಲ್ಲೂ ತಮ್ಮದೇ ಹಾದಿಯಲ್ಲಿ ಕಡಿಮೆ ಅವಧಿಯಲ್ಲಿ ಬದಲಾವಣೆ ತರುತ್ತಾರೆ ಎಂದು ಹೇಳಿದರು.

ಬುಲ್ಡೋಜರ್‍ ನಾಥ್‍ನ ವಿಧ್ವಂಸಕ ಸರ್ಕಾರವು ಕೆಲವೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ, ಕೆಲವೊಮ್ಮೆ ನೇಮಕಾತಿಯನ್ನು ಘೋಷಿಸದೆ ಮತ್ತು ಕೆಲವೊಮ್ಮೆ ಅವರ ವಿರುದ್ಧ ಬಲಪ್ರಯೋಗ ಮಾಡುವ ಮೂಲಕ ಯುವಜನತೆಯ ಕನಸುಗಳನ್ನು ಪದೇ ಪದೇ ತುಳಿಯುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ಬಾರಿ, ಯೋಗಿ ಅವರ ಮಹಿಳಾ ವಿರೋಧಿ ಬುಲ್ಡೋಜರ್ ಧೈರ್ಯಶಾಲಿ ಹುಡುಗಿಯರ ಕನಸುಗಳ ಮೇಲೆ ಓಡಿದೆ. ಅಧಿಕಾರಿಗಳು ಕ್ರಿಮಿನಲ್‍ಗಳ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್‍ಗಳನ್ನು ಬಳಸುತ್ತಿದ್ದಾರೆ ಮತ್ತು ಇದನ್ನು ಬಿಜೆಪಿ ನಾಯಕರು ರಾಜ್ಯದ ಭಾಷಣಗಳಲ್ಲಿ ಆಗಾಗ್ಗೆ ಉಲ್ಲೇಖಿಸುತ್ತಾರೆ ಎಂದು ಪಕ್ಷ ಹೇಳಿದೆ.

ಝಾನ್ಸಿಯಲ್ಲಿ ನಡೆದ ಮ್ಯಾರಥಾನಿನಲ್ಲಿ ಭಾಗವಹಿಸಿದವರು ಸಿಎಂಗೆ ಭಯ ಹುಟ್ಟಿಸಿದ್ದಾರೆ. ಯಾರ ಸಮಯ ಬಂದಿದೆ ಎಂದು ಯಾರಿಗೂ ಗೊತ್ತಿಲ್ಲ. ಭೂಮಿಯ ಮೇಲಿನ ಶಕ್ತಿಯನ್ನು ಯಾರಿಂದಲೂ ನಡೆಯಲು ಸಾಧ್ಯವಿಲ್ಲ. ಲಡ್ ಕೀ ಹೂ, ಲಡ್ ಸಕ್ತಿ ಹೂ ಎಂಬ ಘೋಷಣೆ ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದೆ. ಮಹಿಳಾ ಶಕ್ತಿಯು ತಮ್ಮ ಹಕ್ಕನ್ನು ಚಲಾಯಿಸಲು ಸಿದ್ಧವಾಗಿದೆ ಎಂದು ಹೇಳಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!