ರಹಸ್ಯ ಮಾಹಿತಿ ಸೋರಿಕೆ: ನೌಕದಳ ಕಮಾಂಡರ್ ಸೇರಿ ಐವರ ಬಂಧನ

ನವದೆಹಲಿ: ದೇಶದ ಸಬ್ ಮರೈನ್ ಪ್ರಾಜೆಕ್ಟ್ ಸಂಬಂಧಿಸಿದಂತೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆ ಸಿಬಿಐ, ನೌಕಾದಳ ಕಮಾಂಡರ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಿದೆ.

ಇಬ್ಬರು ನಿವೃತ್ತ ನೌಕಾದಳ ಸಿಬ್ಬಂದಿ ಹಾಗೂ ಓರ್ವ ವ್ಯಕ್ತಿಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಸಿಬಿಐ ದೆಹಲಿ, ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ ಸೇರಿದಂತೆ ಇದುವರೆಗೂ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಶೋಧ ಕಾರ್ಯಾಚರಣೆ ವೇಳೆ ದಾಖಲೆಪತ್ರಗಳು, ಡಿಜಿಟಲ್ ಸಾಕ್ಷ್ಯಗಳು ಸಿಬಿಐ ಅಧಿಕಾರಿಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ. ಸಿಬಿಐ ತನಿಖೆಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ನೌಕಾದಲ ತಿಳಿಸಿದೆ. ಅಲ್ಲದೆ ಆಂತರಿಕ ತನಿಖಾ ಸಮಿತಿಯನ್ನು ರಚನೆ ಮಾಡಲಾಗಿದ್ದು ರಕ್ಷಣಾ ಮಾಹಿತಿ ಸೋರಿಕೆಯಾದುದರ ಕುರಿತು ಪರಿಶೀಲನೆ ನಡೆಸಲಿದೆ.

Latest Indian news

Popular Stories

error: Content is protected !!