ರಾಜ್ಯದಲ್ಲಿ ಇಂದು 2479 ಮಂದಿ ಕೋವಿಡ್-19 ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟವ್ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 2,479 ಹೊಸ ಕೇಸ್ ದಾಖಲಾಗಿದ್ದು, 4 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ನಿನ್ನೆ 1,041 ಇದ್ದ ಕೇಸ್ ಇಂದು ಬರೋಬ್ಬರಿ 2,053ಕ್ಕೆ ಏರಿಕೆ ಕಂಡು ಮೂರನೇ ಅಲೆಯ ಆತಂಕ ಹೆಚ್ಚಿಸಿದೆ.

ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.2.59ಕ್ಕೆ ಏರಿಕೆ ಕಂಡಿದೆ. ಆದರೆ ಇಂದು ಯಾವುದೇ ಓಮಿಕ್ರಾನ್ ಪ್ರಕರಣ ಕಂಡು ಬಂದಿಲ್ಲ. ಇಂದು ಒಟ್ಟು 95,391 ಜನರಿಗೆ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸತತ ಮೂರು ದಿನಗಳಿಂದ 1 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಇಂದು ಆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದ್ದು, 2 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿರುವುದು ಸಾಕಷ್ಟು ಆತಂಕ ಮೂಡಿಸಿದೆ. ಅಲ್ಲದೆ ರಾಜ್ಯ ಸರ್ಕಾರ ಇದೀಗ ಕಠಿಣ ನಿಯಮಗಳ ಮೂಲಕ ಈ ಏರಿಕೆಯತ್ತ ಮುಖಮಾಡಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಣ ಮಾಡಲು ಮುಂದಾಗುತ್ತಿದೆ. ಸರ್ಕಾರ ಯಾವ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Latest Indian news

Popular Stories

error: Content is protected !!