ರಾಜ್ಯಸಭೆಯಲ್ಲಿ ದೆಹಲಿ ಸೇವೆಗಳ ಮಸೂದೆ ಅಂಗೀಕಾರ

ಹೊಸದಿಲ್ಲಿ: ಬಹು ನಿರೀಕ್ಷಿತ ದಿಲ್ಲಿ ಸೇವೆಗಳ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಸಿಕ್ಕಿದೆ. ಬರೋಬ್ಬರಿ ಐದೂವರೆ ಗಂಟೆಗಳ ಕಾಲ ನಡೆದ ಬಿರುಸಿನ ವಾಕ್ಸಮರದ ಬಳಿಕ ನಡೆದ ಮತದಾನದಲ್ಲಿ ಸರಕಾರದ ಪರವಾಗಿ 131 ಮತಗಳು ಚಲಾವಣೆಯಾದರೆ, ಕಾಂಗ್ರೆಸ್‌ ನೇತೃತ್ವದ ಐ.ಎನ್‌.ಡಿ.ಐ.ಎ. ಒಕ್ಕೂಟದ ಪರವಾಗಿ 102 ಮತಗಳು ಬಿದ್ದಿವೆ. ಕೇಂದ್ರ ಸರಕಾರದ ಪರವಾಗಿ ಬಿಜು ಜನತಾ ದಳ, ಟಿಡಿಪಿ,
ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದರು ಮತ ಹಾಕಿದ್ದಾರೆ. ಇದರಿಂದಾಗಿ ದಿಲ್ಲಿ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಮತ್ತು ಅವರ ಸೇವೆಗೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರಕಾರದ ಮಾತು ಅಂತಿಮವಾಗಲಿದೆ.

ಮಸೂದೆಯ ಬಗ್ಗೆ ವಿಪಕ್ಷಗಳ ನಾಯಕರು ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉದ್ದೇಶಿತ ಮಸೂದೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂ ಸುವುದಿಲ್ಲ ಎಂದರು.
“ಆಮ್‌ ಆದ್ಮಿ ಪಕ್ಷವನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್‌ಮಸೂದೆಯನ್ನು ವಿರೋಧಿಸುತ್ತಿದೆ. ಆ ಪಕ್ಷ ಈಗ ಆಪ್‌ನ ತೊಡೆಯಲ್ಲಿ ಕುಳಿತಿದೆ’ ಎಂದು ಲೇವಡಿ ಮಾಡಿದರು.

ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡ ಅಮಿತ್‌ ಶಾ, ದಿಲ್ಲಿಯ ಜನರಿಗೆ ಭ್ರಷ್ಟಾಚಾರ ರಹಿತ ಸೇವೆ ನೀಡಲು ಇದು ನೆರವಾಗಲಿದೆ ಎಂದರು.

ಐ.ಎನ್‌.ಡಿ.ಐ.ಎ. ಮೈತ್ರಿಕೂಟವನ್ನು ಉಳಿಸುವ ನಿಟ್ಟಿನಲ್ಲಿ ದಿಲ್ಲಿ ಸೇವೆಗಳ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಸದನದಲ್ಲಿ ಮಸೂದೆ ಅಂಗೀಕಾರವಾದ ಕೂಡಲೇ ಆಪ್‌ ವಿಪಕ್ಷಗಳ ಮೈತ್ರಿಕೂಟ ತೊರೆಯಲಿದೆ ಎಂದು ಲೇವಡಿ ಮಾಡಿದ್ದಾರೆ. ವಿಪಕ್ಷಗಳ ಒಕ್ಕೂಟಕ್ಕೆ ಯಾರೇ ಸೇರಿಕೊಳ್ಳಲಿ ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಜಯ ಗಳಿಸಲಿದೆ ಎಂದರು.

Latest Indian news

Popular Stories