ರಾಜ್ಯ ಸರಕಾರದಿಂದ ಆರ್.ಎಸ್.ಎಸ್’ಗೆ ಬಿಗ್ ಶಾಕ್!

ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ ಎಸ್‌ಎಸ್ ಗೆ ಬಿಗ್ ಶಾಕ್ ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಆರ್ ಎಸ್‌ಎಸ್ಗೆ ನೀಡಿದ್ದ 35 ಎಕರೆ 33 ಗುಂಟೆ ಗೋಮಾಳ ಜಮೀನು ಹಸ್ತಾಂತರ ಆದೇಶಕ್ಕೆ ತಡೆ ನೀಡಿದೆ.

ಹಿಂದಿನ ಬಿಜೆಪಿ ಸರ್ಕಾರವು ಆರ್ ಎಸ್‌ಎಸ್ ಗೆ ಸೇರಿದ ಜನ ಸೇವಾ ಟ್ರಸ್ಟ್ ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿ ಗ್ರಾಮದ ತಾವರಕೆರೆ ಹೋಬಳಿಯಲ್ಲಿ 35 ಎಕರೆ 33 ಗುಂಟೆ ಗೋಮಾಳ ಜಮೀನನನ್ನು ನೀಡಿತ್ತು.

ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಭೂಮಿ ಹಸ್ತಾಂತರಕ್ಕೆ ತಡೆ ನೀಡಿದೆ.

2023 ರ ಮೇ.22 ರಂದು ಜಿಲ್ಲಾಧಿಕಾರಿ ಗೋಮಾಳ ಭೂಮಿಯನ್ನು ಜನಸೇವಾ ಟ್ರಸ್ಟ್ ಗೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಜನಸೇವಾ ಟ್ರಸ್ಟ್ ಗೆ 35 ಎಕರೆ, 33 ಗುಂಟೆ ಭೂಮಿ ಮಂಜೂರು ಮಾಡುವುದನ್ನು ತಡೆಹಿಡಿಯಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Latest Indian news

Popular Stories