ಹರ್ದೋಯಿ: ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಅಮಿತ್ ಶಾ ಅವರು, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ‘ಜನ ವಿಶ್ವಾಸ ಯಾತ್ರೆ’ಯನ್ನು ಉದ್ದೇಶಿಸಿ ಮಾತನಾಡಿದ ಶಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ತಡೆಯಲು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಅವರಿಗೆ ಸವಾಲು ಹಾಕಲು ನಾನು ಇಲ್ಲಿದ್ದೇನೆ. ದೇವಾಲಯದ ನಿರ್ಮಾಣವನ್ನು ನಿಲ್ಲಿಸಲು ನಿಮ್ಮ ಶಕ್ತಿಯನ್ನು ಬಳಸಿ ಎಂದರು.
“ಕೆಲವೇ ತಿಂಗಳುಗಳಲ್ಲಿ, ಭಗವಾನ್ ರಾಮನ ಭವ್ಯವಾದ ದೇವಾಲಯವು ಅಲ್ಲಿ ನಿಲ್ಲುತ್ತದೆ” ಎಂದು ಕೇಂದ್ರ ಸಚಿವರು ಹೇಳಿದರು.