ಬೆಂಗಳೂರು: ಸಂಚಾರ ಪೊಲೀಸರಿಗೆ ಸವಾಲಾಗಿದ್ದಂತ ಬಾಕಿ ದಂಡ ವಸೂಲಿಗಾಗಿ ಮಾಸ್ಟರ್ ಪ್ಲಾನ್ ನಡೆಸಿ, ಶೇ.50ರಷ್ಟು ರಿಯಾಯಿತಿಯನ್ನು ದಂಡದಲ್ಲಿ ಘೋಷಣೆ ಮಾಡಲಾಗಿತ್ತು. ಶೇ. 50 ರ ರಿಯಾಯಿತಿ ಸೌಲಭ್ಯ ಶನಿವಾರ ಅಂತ್ಯಗೊಂಡಿದ್ದು, ರಾಜ್ಯಾದ್ಯಂತ 9 ದಿನದಲ್ಲಿ 52.49 ಲಕ್ಷ ಕ್ಕೂ ಹೆಚ್ಚು ಕೇಸ್ ಗಳಿಂದ ಒಟ್ಟು 122.07 ಕೋಟಿ ರೂ.ದಂಡ ಸಂಗ್ರವಾಗಿದೆ.
ಈ ಬಗ್ಗೆ ಸಂಚಾರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸಂಚಾರಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆಯಾದ ದಿನದಿಂದ ನಿನ್ನೆಯವರೆಗೆ 52.49 ಲಕ್ಷ ಪ್ರಕರಣಗಳಲ್ಲಿ 122.07 ಕೋಟಿ ರೂಪಾಯಿ ದಂಡ ಕಲೆಕ್ಷನ್ ಆಗಿದೆ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ
ಯಾವ ಯಾವ ದಿನ ಎಷ್ಟು ದಂಡ ವಸೂಲಿ
ಫೆಬ್ರವರಿ 3 – 2.24 ಲಕ್ಷ ಕೇಸ್, 7 ಕೋಟಿ ರೂ.
ಫೆಬ್ರವರಿ 4- 3 ಲಕ್ಷ ಕೇಸ್, 9 ಕೋಟಿ ರೂ.
ಫೆಬ್ರವರಿ 5- 2.87 ಲಕ್ಷ ಕೇಸ್, 7.49 ಕೋಟಿ ರೂ.
ಫೆಬ್ರವರಿ 06- 3.34 ಲಕ್ಷ ಕೇಸ್, 9.57 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.