ಎಲ್ಲದರಲ್ಲೂ ತಪ್ಪು ಹುಡುಕುವುದು, ವಿಕೃತಿಗಳನ್ನು ಯೋಚಿಸುವುದು ಸರಿಯಲ್ಲ. ಲೇಖಕ, ಸಾಹಿತಿ ಆಗಿರುವ ರೋಹಿತ್ ಚಕ್ರತೀರ್ಥ ಅವರನ್ನು ರಾಜ್ಯ ಯಕ್ಷಗಾನ ಸಮ್ಮೇಳನಕ್ಕೆ ಕರೆಯುವುದು ತಪ್ಪಲ್ಲ. ರಾಷ್ಟ್ರೀಯ ವಿಚಾರಗಳನ್ನು ಹಿಡಿದುಕೊಂಡು ಬರೆಯುವ ವ್ಯಕ್ತಿಯನ್ನು ಆಹ್ವಾನಿಸಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ರಾಷ್ಟ್ರೀಯ ವಿಚಾರಗಳನ್ನು ಬೆಂಬಲಿಸುತ್ತದೆ. ಈ ವಿಚಾರದಡಿಯಲ್ಲಿ ಕೆಲಸ ಮಾಡುವ ಪಾರ್ಟಿ ನಮ್ಮದು. ರೋಹಿತ್ ಚಕ್ರತೀರ್ಥ ಮಾತ್ರವಲ್ಲ, ಇಂತಹ ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ಇನ್ನು ಹತ್ತು ಜನರನ್ನು ಕರೆಯುತ್ತೇವೆ ಎಂದು ಹೇಳಿದರು.