ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡದ ಧ್ವಜ ಹಾರಿಸಿ ಇದೀಗ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದೇಶ್ ಆರ್ ವಲ್ಲಿ, ಲಂಡನಿನ ಸಿಟಿ ಯೂನಿವರ್ಸಿಟಿಯ ಭಾರತೀಯ ವಿದ್ಯಾರ್ಥಿಯಾಗಿದ್ದು ಕರ್ನಾಟಕ ರಾಜ್ಯ ಧ್ವಜಾರೋಹಣ ಮಾಡಿ ವೈರಲಾಗಿದ್ದಾರೆ.
ಘಟಿಕೋತ್ಸವ ಸಮಾರಂಭದಲ್ಲಿ ಅವರ ಪದವಿ ಸ್ವೀಕರಿಸುವ ಮುನ್ನ ಅವರು ಕನ್ನಡದ ಬಾವುಟವನ್ನು ಹಿಡಿದು ಗೌರವ ಸಲ್ಲಿಸಿದ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
Adesh R Valli ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸ್ವತಃ MS ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.