ಲಕ್ಷದ್ವೀಪ  ಸಂಸದ ಮೊಹಮ್ಮದ್‌ ಫೈಜಲ್‌ಗೆ 10 ವರ್ಷ ಜೈಲು

ಕವರತ್ತಿ: ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌ಗೆ, ಕೊಲೆಯತ್ನ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಯನ್ನು ಲಕ್ಷದ್ವೀಪ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಧಿಸಿದೆ.

ಫೈಜಲ್‌ ಸೇರಿದಂತೆ ಒಟ್ಟು ನಾಲ್ವರಿಗೆ ಈ ಶಿಕ್ಷೆ ವಿಧಿಸಲಾಗಿದೆ. 2009ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಇವರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು.

ಕೇಂದ್ರದ ಮಾಜಿ ಸಚಿವ ಪಿ.ಎಂ.ಸಯೀದ್‌ ಅಳಿಯ ಪದನಾಥ್‌ ಸಲಿಹ್‌ ಮೇಲೆ 2009ರಲ್ಲಿ ಫೈಜಲ್‌ ಮತ್ತಿತರರು ದಾಳಿ ಮಾಡಿದ್ದರು. ಪಕ್ಕದಮನೆಯಲ್ಲಿ ನಡೆಯುತ್ತಿದ್ದ ರಾಜಕೀಯ ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ ಹೊತ್ತಿನಲ್ಲಿ ಇದು ಸಂಭವಿಸಿದೆ ಎನ್ನುವುದು ಆರೋಪ.

ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಫೈಜಲ್‌ ಹೇಳಿದ್ದಾರೆ.

Latest Indian news

Popular Stories